ದಾವಣಗೆರೆ, ಜು.10- ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಓಡಿಡಿ ಸೆಮ್‌ಗಳನ್ನು ಹಾಗೂ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿ, ಇವನ್ ಸೆಮ್‌ನ ಪರೀಕ್ಷೆಯನ್ನು ಲಸಿಕೆ ನೀಡಿದ ಮೇಲೆ ಪರೀಕ್ಷೆ ನಡೆಸುವಂತೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ ಸಂಘಟನೆ ಸರ್ಕಾರವನ್ನು ಕೋರಿದೆ. ಕಳೆದ ವರ್ಷ ನಡೆದ ಡಿಪ್ಲೋಮಾ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸೋಂಕು ಕಂಡುಬಂದಿರು ವುದು ಬೇಸರದ ಸಂಗತಿಯಾಗಿದೆ. ಇಂತಹ ಘಟನೆ ಮತ್ತೆ ಮರುಕಳಿಸುವುದಿಲ್ಲ ಎಂಬುದಕ್ಕೆ ಏನು ಸಾಕ್ಷಿ? ದ್ವಿತೀಯ ವರ್ಷದ ರಿಪೀಟರ್ಸ್ ಪಿಯುಸಿ ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸಿದ ಹಾಗೇ ಡಿಪ್ಲೋಮಾ ರಿಪೀಟರ್ಸ್ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
January 11, 2025