ದಾವಣಗೆರೆ, ಫೆ. 20 – ನಗರದ ದವನ್ ಇನ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿಗೆ ಬಿಬಿಎಂ., ಬಿಸಿಎ ಮತ್ತು ಬಿ.ಕಾಂ.ಗಳ ಪದವಿ ಪರೀಕ್ಷೆಯಲ್ಲಿ 9 ವಿದ್ಯಾರ್ಥಿಗಳು ರಾಂಕ್ ಗಳನ್ನು ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ರಾದ ಶ್ರೀಮತಿ ಹೆಚ್.ಸಿ.ಅಶ್ವಿನಿ ತಿಳಿಸಿದ್ದಾರೆ.
ಬಿ.ಬಿ.ಎಂ. ವಿಭಾಗದಲ್ಲಿ ಎಲ್.ಜಿ. ವರ್ಷಿಣಿ ದ್ವಿತೀಯ ರಾಂಕ್, ತೃಪ್ತಿ ಕೆ. ಚೌಹಾಣ್ 3ನೇ ರಾಂಕ್ ಮತ್ತು ಶುಭಂ ಎಂ. ಜೈನ್ 6ನೇ ರಾಂಕ್ ಗಳಿಸಿದ್ದಾರೆ. ಬಿ.ಸಿ.ಎ. ವಿಭಾಗದಲ್ಲಿ ಎಸ್.ಬಿ. ನವ್ಯ 3ನೇ ರಾಂಕ್, ಎಂ.ಎನ್. ನಿಖಿತ 6ನೇ ರಾಂಕ್, ಸುಪ್ರಿತ ಆರ್. ಗುರ್ಲ್ಹೊಸೂರು 7ನೇ ರಾಂಕ್ ಮತ್ತು ನಮೀರ ನಾಜ್ 9ನೇ ರಾಂಕ್ ಗಳಿಸಿ ಉತ್ತೀರ್ಣರಾಗಿದ್ದಾರೆ ಹಾಗೂ ಬಿ.ಕಾಂ. ವಿಭಾಗದಲ್ಲಿ ಜಿ.ಎಸ್. ತೃಪ್ತಿ 8ನೇ
ರಾಂಕ್ ಮತ್ತು ಎನ್.ಎಸ್. ಅಶ್ವಿನಿ 10ನೇ ರಾಂಕ್ ಪಡೆದಿದ್ದಾರೆ.
ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ವೀರೇಶ್ ಪಟೇಲ್, ಜಂಟಿ ಕಾರ್ಯದರ್ಶಿ ಡಾ. ಜಿ.ಎಸ್. ಅಂಜು, ನಿರ್ದೇಶಕ ಹರ್ಷರಾಜ್ ಗುಜ್ಜಾರ್, ಶೈಕ್ಷಣಿಕ ಸಲಹೆಗಾರ ಪ್ರೊ. ಬಾತಿ ಬಸವರಾಜ್ ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.