ಬೆಂಗಳೂರಿನಲ್ಲಿ ಇಂದಿನ ಪಂಚಮಸಾಲಿ ಸಮಾಜದ ಸಮಾವೇಶ

ಜಿಲ್ಲೆಯಿಂದ 10 ಸಾವಿರ ಜನರು

ದಾವಣಗೆರೆ, ಫೆ.21- ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒದಗಿಸುವಂತೆ ಆಗ್ರಹ ಪಡಿಸಿ, ಪಂಚಮ ಸಾಲಿ ಸಮಾಜದ ಉಭಯ ಜಗದ್ಗುರುಗಳು ನಡೆಸುತ್ತಿರುವ ಬೃಹತ್ ಪಾದಯಾತ್ರೆಯು ಇಂದು ಬೆಂಗಳೂರು ತಲುಪಿದೆ.

ಪಂಚಮಸಾಲಿ ಸಮಾಜದ ಕೂಡಲ ಸಂಗಮ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಜಂಟಿಯಾಗಿ ಈ ಪಾದಯಾತ್ರೆಯ ಮೂಲಕ ಬೆಂಗಳೂರು ತಲುಪಿದ್ದಾರೆ.

ಈ ಹಿನ್ನೆಲೆಯಲ್ಲಿ ನಾಳೆ ದಿನಾಂಕ 21 ಭಾನುವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರಿನಲ್ಲಿ ಏರ್ಪಾಡಾಗಿರುವ ಐತಿಹಾಸಿಕ ಪಂಚಮಸಾಲಿ ಸಮಾಜದ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲೆಂದು ರಾಜ್ಯಾದ್ಯಂತ ಸಮಾಜ ಬಾಂಧವರು ರಾಜಧಾನಿಯತ್ತ ತೆರಳುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಿಂದಲೂ ಸುಮಾರು 10 ಸಾವಿರಕ್ಕೂ ಜನರು 163 ಬಸ್ಸು ಮತ್ತು 150 ಕ್ಕೂ ಹೆಚ್ಚು ಕಾರು, ಟಿಟಿ ಮೂಲಕ ಇಂದು ರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.

ಹರಿಹರ ಕ್ಷೇತ್ರದ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮತ್ತು ನಗರ ಪಾಲಿಕೆ ಮಹಾಪೌರ ಬಿ.ಜಿ.ಅಜಯ್‌ಕುಮಾರ್ ಅವರುಗಳು ನೇತೃತ್ವದಲ್ಲಿ ಜಿಲ್ಲೆಯ ಜನರು ರಾಜಧಾನಿಗೆ ಪ್ರಯಾಣಿಸುತ್ತಿರುವುದಾಗಿ ಜಿಲ್ಲೆಯ ಸಮಾಜದ ಮುಖಂಡರುಗಳಾದ ಮಹಾಂತೇಶ್ ಒಣರೊಟ್ಟಿ, ಬೆಳ್ಳೂಡಿ ಶಿವಕುಮಾರ್, ಎಸ್.ಓಂಕಾರಪ್ಪ, ಅರಸೀಕೆರೆ ಕೊಟ್ರೇಶ್, ಕಾರಿಗನೂರು ಗಂಗಾಧರ್, ತಣಿಗೆರೆ ಶಿವಕುಮಾರ್ ಮತ್ತಿತರರು `ಜನತಾವಾಣಿ’ಗೆ ವಿವರಿಸಿದ್ದಾರೆ.

error: Content is protected !!