ಸೆಮಿಸ್ಟರ್ ತರಗತಿಗಳಿಗೆ ಡಿಪ್ಲೋಮಾ ವಿದ್ಯಾರ್ಥಿಗಳ ಮರುಪ್ರವೇಶ

ದಾವಣಗೆರೆ, ಜು.11- 2, 4, ಮತ್ತು 6ನೇ ಸೆಮಿಸ್ಟರ್ ತರಗತಿ ಗಳಿಗೆ ಮರುಪ್ರವೇಶವನ್ನು ಪಡೆಯಲು ಡಿಪ್ಲೋಮಾ ವಿದ್ಯಾರ್ಥಿಗಳು ಇದೇ ದಿನಾಂಕ 15 ರವರೆಗೆ ಯಾವುದೇ ದಂಡವಿಲ್ಲದೇ ಶುಲ್ಕ ಪಾವತಿಸಬಹುದು. ಇದೇ ದಿನಾಂಕ 16 ರಿಂದ ದಿನಾಂಕ 24 ರವರೆಗೆ 200 ರೂ. ದಂಡ ಶುಲ್ಕ ಹಾಗೂ ದಿನಾಂಕ 25 ರಿಂದ ಆಗಸ್ಟ್ 3 ರವರೆಗೆ 400 ರೂ. ದಂಡ ಶುಲ್ಕ ಹಾಗೂ 1000 ರೂ. ದಂಡ ಶುಲ್ಕ ಪಾವತಿಯೊಂದಿಗೆ ಆಗಸ್ಟ್ 4 ರಿಂದ ಆಗಸ್ಟ್ 13 ಮರು ಪ್ರವೇಶ ಪಡೆಯಲು ಅಂತಿಮ ದಿನಾಂಕವಾಗಿದೆ. 

ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳು ಕಚೇರಿಯ ನಗದು ವಿಭಾಗದಲ್ಲಿ ಶುಲ್ಕ ಪಾವತಿಸಿ ಪ್ರವೇಶ ಪಡೆಯಬೇಕು ಎಂದು ಸರ್ಕಾರಿ ಡಿಆರ್‍ಆರ್ ಪಾಲಿಟೆಕ್ನಿಕ್ ಪ್ರಾಚಾರ್ಯರು ತಿಳಿಸಿದ್ದಾರೆ.

error: Content is protected !!