ಕೊರೊನಾ ಸಂಕಷ್ಟದಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಜನತೆ
ದಾವಣಗೆರೆ, ಜು.10- ಕೊರೊನಾ ಒಂದು ಹಾಗೂ ಎರಡನೇ ಅಲೆಯಿಂದ ಈಗಾಗಲೇ ಜನತೆ ಜರ್ಝರಿತರಾಗಿದ್ದಾರೆ. ಇದೀಗ 2ನೇ ಅಲೆ ಕಡಿಮೆ ಯಾಗಿ ಚೇತರಿಸಿಕೊಳ್ಳುತ್ತಿರುವ ಜನತೆಗೆ ಪೊಲೀಸರ ದಂಡ ಪ್ರಯೋಗ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಹೌದು, ಲಾಕ್ಡೌನ್ ತೆರವಾಗಿ ಕೆಲವೇ ದಿನಗಳಾ ಗಿವೆ. ಲಾಕ್ಡೌನ್ ವೇಳೆ ವ್ಯಾಪಾರ-ವಹಿವಾಟು ಇಲ್ಲದೆ, ವೇತನವೂ ಇಲ್ಲದೆ ಬಡ ಹಾಗೂ ಮಧ್ಯಮ ವರ್ಗದ ಜನರ ಜೇಬು ಅಕ್ಷರಷಃ ಖಾಲಿಯಾಗಿರುವುದು ನಿಜ.
ಈಗಷ್ಟೇ ಲಾಕ್ ತೆರವಾಗಿ ಕೆಲವರು ವ್ಯಾಪಾರ ಆರಂಭಿಸಿದರೆ ಮತ್ತೆ ಕೆಲವರು ಕೆಲಸಕ್ಕೆ ಹೋಗಲಾರಂಭಿಸಿದ್ದಾರೆ. ಹಲವರು ಕೆಲಸ ಕಳೆದುಕೊಂಡಿದ್ದಾರೆ. ಆದರೆ ಇವರಿಗೆಲ್ಲ ಪೊಲೀಸರು ಹೆಲ್ಮೆಟ್, ಮಾಸ್ಕ್, ಲೈಸನ್ಸ್ ಎಂದು ದಂಡ ವಿಧಿಸುತ್ತಿರುವುದು ಗಾಯದ ಮೇಲೆ ಬರೆ ಎಳೆಯುವಂತಾಗಿದೆ. ಈ ಬಗ್ಗೆ ಸಾರ್ವಜನಿಕರಿಂದಲೂ ಸಾಕಷ್ಟು ಆಕ್ಷೇಪ ವ್ಯಕ್ತವಾಗುತ್ತಿವೆ.
ಲಾಕ್ಡೌನ್ ಪರಿಣಾಮ ಅನೇಕರು ವಾಹನ ಚಾಲನಾ ಪರ ವಾನಗಿ ಮಾಡಿಸಿಕೊಳ್ಳಲು ಸಾಧ್ಯ ವಾಗಿಲ್ಲ. ನಗರಕ್ಕೆ ಬರಲಾಗದೇ ವಾಹನಗಳ ವಿಮೆ ಮಾಡಿಸಿಕೊ ಳ್ಳಲೂ ಸಾಧ್ಯವಾಗಿಲ್ಲ. ಉತ್ತಮ ಗುಣಮಟ್ಟದ ಹೆಲ್ಮೆಟ್ ಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಒಂದಿಷ್ಟು ದಿನ ರಿಯಾಯಿತಿ ನೀಡುವುದು ಉತ್ತಮ ಎನ್ನುವುದು ಬಹುತೇಕ ಸಾರ್ವಜನಿಕರ ಅಭಿಪ್ರಾಯವಾಗಿದೆ.
ನೂತನ ಎಸ್ಪಿ ಅವರು ಕಾನೂನು ಪಾಲನೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಕ್ರಮ ಚಟುವಟಿಕೆಗಳನ್ನು ತಡೆಯಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅವರ ಕ್ರಮಗಳು ಅಭಿನಂದನಾರ್ಹ. ಆದರೆ ಗುಣಮಟ್ಟದ ಹೆಲ್ಮೆಟ್, ಲೈಸನ್ಸ್, ವಾಯು ಮಾಲಿನ್ಯ ಪ್ರಮಾಣ ಪತ್ರ, ಇನ್ಷೂರೆನ್ಸ್ ಕೇಳಿ ದಂಡ ವಿಧಿಸುವುದಕ್ಕೆ ತುಸು ಕಾಲಾವಕಾಶ ನೀಡಲಿ ಎನ್ನುತ್ತಿದ್ದಾರೆ ಬಡ ವರ್ಗದ ಜನತೆ.
ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಹಳ್ಳಿಗರನ್ನೇ ಪೊಲೀಸರು ಟಾರ್ಗೆಟ್ ಮಾಡುತ್ತಿದ್ದಾರೆ. ಸದ್ಯ ಕೃಷಿ ಚಟುವಟಿಕೆಗಳು ನಡೆಯುತ್ತಿರುವ ದಿನ ಮಾನಗಳಲ್ಲಿ ರೈತರು ಬಿತ್ತನೆ ಬೀಜ, ಗೊಬ್ಬರ, ಔಷಧಿಗೆಂದು ನಗರ ಪ್ರದೇಶಗಳಿಗೆ ಬರಲೇ ಬೇಕಾಗಿರುತ್ತದೆ. ಈ ಹಿಂದೆ ಲಾಕ್ಡೌನ್ ಪರಿಣಾಮ ನಗರದತ್ತ ಮುಖ ಮಾಡದ ಗ್ರಾಮೀಣ ಜನರು ಇದೀಗ ನಗರಗಳಿಗೆ ಬರುತ್ತಿದ್ದಾರೆ. ಆದರೆ ಅವರನ್ನೇ ಟಾರ್ಗೆಟ್ ಮಾಡಿ ದಂಡ ವಿಧಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ?ಎನ್ನುವುದು ಕೃಷಿಕರ ಪ್ರಶ್ನೆ.
ಕಾನೂನು ಪಾಲನೆ ಮಾಡಬೇಕಾಗಿರುವುದು ಪ್ರತಿ ಯೊಬ್ಬರ ಕರ್ತವ್ಯ. ಆದರೆ ಕೊರೊನಾದಿಂದ ಪ್ರತಿಯೊ ಬ್ಬರೂ ಸಂಕಷ್ಟಕ್ಕೀಡಾಗಿ, ಗಾಯಗೊಂಡಿರುವ ಜನತೆಯ ಮೇಲೆ ಬರೆ ಎಳೆಯುವುದು ಬೇಡ. ಒಂದಿಷ್ಟು ಕಾಲಾವಕಾಶ ನೀಡಲಿ ಎಂಬುದು ಜನತೆಯ ಮನವಿ.