ದಾವಣಗೆರೆ, ಏ.20 – 2021-22ರ ಸಾಲಿನ ಕಂದಾಯ ಪಾವತಿಸಲು ಶೇ. 5ರ ರಿಯಾಯಿತಿ ಇದೇ ತಿಂಗಳು 30ರಂದು ಮುಗಿಯುತ್ತಿದ್ದು, ಇಲ್ಲಿ ತನಕ ಆನ್ ಲೈನ್ ಎಂಟ್ರಿ ಆಗಿರದೇ ಜನಸಾಮಾನ್ಯರಿಗೆ ತೊಂದರೆ ಆಗಿದೆ. ಈ ಕೂಡಲೇ ಸರಿಪಡಿಸಿ ಕೊರೊನಾ 2ನೇ ಅಲೆ ಪ್ರಾರಂಭವಾಗಿದ್ದು, ಗುಂಪು ಗುಂಪಾಗಿ ಆಸ್ತಿ ತೆರಿಗೆ ಪಾವತಿಸಲು ಸಾರ್ವಜನಿಕರು ಪಾಲಿಕೆಗೆ ಬರದ ಹಾಗೆ ಶೇ.5 ರಿಯಾಯಿತಿಯನ್ನು ಮೇ 30ರವರೆಗೆ ವಿಸ್ತರಿಸಲು ಮಹಾಪೌರರು ಸರ್ಕಾರಕ್ಕೆ ಅನುಮತಿ ಪಡೆಯಲು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಅವರು ಒತ್ತಾಯಿಸಿದ್ದಾರೆ.
ಆಸ್ತಿ ತೆರಿಗೆಯ ದಂಡ ರಹಿತ ಪಾವತಿಗೆ ಜೂನ್ 30 ಕೊನೆ ಇದ್ದು, ಇದನ್ನು ವಿಸ್ತರಿಸಿ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಬೇಕೆಂದು ಆಗ್ರಹಿಸಿದ್ದಾರೆ.