ಕ್ರೈಸ್ತ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಎಂಗೆ ಮನವಿ

ದಾವಣಗೆರೆ, ಫೆ.17- ಕ್ರೈಸ್ತ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕ್ರಿಶ್ಚಿಯನ್‌ ಫೋರಂ ಫಾರ್‌ ಹ್ಯೂಮನ್‌ ರೈಟ್ಸ್‌ ವತಿಯಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಲಾಯಿತು ಎಂದು ರಾಜ್ಯ ಅಧ್ಯಕ್ಷ ಬಿ. ರಾಜಶೇಖರ್‌ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂಬಂಧ ಬೆಂಗಳೂರಿನ ನೃಪತುಂಗ ರಸ್ತೆಯ ವೈ.ಎಂ.ಸಿ ಇಂಟರ್‌ನ್ಯಾಷನಲ್‌ ಪ್ರೋಗ್ರಾಂ ಸೆಂಟರ್‌ನಲ್ಲಿ ಕ್ರೈಸ್ತ ನಾಯಕರ ಒಂದು ದಿನದ ಶೃಂಗಸಭೆ ನಡೆಸಲಾಯಿತು ಎಂದು ಹೇಳಿದರು. ಸರ್ಕಾರಗಳು ಕ್ರೈಸ್ತ ಸಮುದಾಯವನ್ನು ಕಡೆಗಣಿಸುತ್ತಿದ್ದು, ಕ್ರೈಸ್ತರ ಮೇಲಾ ಗುತ್ತಿರುವ ದೌರ್ಜನ್ಯ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.

ಸಮುದಾಯದ ಅಭಿವೃದ್ಧಿ ಹಿನ್ನೆಲೆಯಲ್ಲಿ `ಕ್ರೈಸ್ತ ಅಲ್ಪಸಂಖ್ಯಾತರ ನಿಗಮ’ ಸ್ಥಾಪಿಸಬೇಕು. ಕ್ರೈಸ್ತರ ಮೇಲೆ ನಡೆಯುವ ದಾಳಿಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ವಿವಿಧ ಜಿಲ್ಲೆಗಳಲ್ಲಿ ಕ್ರೈಸ್ತರಿಗೆ ಸಮಾಧಿ ಸ್ಥಳ ಇರುವುದಿಲ್ಲ. ಕೂಡಲೇ ಜಾಗ ಒದಗಿಸಬೇಕೆಂದು ಆಗ್ರಹಿಸಿದರು.

ನೇಮಕ : ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಸೇವಕರಾದ ರಾಜು ಬಂದೇಲ ಅವರನ್ನು ಕ್ರಿಶ್ಚಿಯನ್‌ ಫೋರಂ ಫಾರ್ ಹ್ಯೂಮನ್‌ ರೈಟ್ಸ್‌ನ ಆಂಧ್ರಪ್ರದೇಶದ ರಾಜ್ಯ ಸಂಯೋಜಕರನ್ನಾಗಿ ನೇಮಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಬುನಿಯನ್‌ ಭಾಸ್ಕರ್‌, ಮುನಿಯನ್‌ ಸುಮಿತ್ರ, ಫಾಸ್ಟರ್ ಜೇಕಬ್‌, ಚೆಲ್ವರಾಜ್ ಉಪಸ್ಥಿತರಿದ್ದರು.

error: Content is protected !!