ಮಲೇಬೆನ್ನೂರು, ಫೆ. 16 – ಕರ್ನಾಟಕ ಪಾರದರ್ಶಕತೆ ಅಧಿನಿಯಮ 2000 ನಿಯಮ 17ನ್ನು ಉಲ್ಲಂಘಿಸಿ ಮ್ಯಾನುಯಲ್ ಟೆಂಡರ್ ಕರೆಯಲು ಪುರಸಭೆ ಮುಖ್ಯಾಧಿಕಾರಿ ಮತ್ತು ಕಿರಿಯ ಅಭಿಯಂತರರಿಗೆ ತಾವೇ ಒತ್ತಾಯಿಸಿರುವುದಾಗಿ ಮನವಿಯಲ್ಲಿ ಒಪ್ಪಿಕೊಂಡಿರುವಂತೆ, ನಿಮ್ಮ ಸದಸ್ಯತ್ವವನ್ನು ದುರುಪಯೋಗ ಪಡಿಸಿಕೊಂಡಿರುವ ಕುರಿತು ನಿಮ್ಮ ಸದಸ್ಯತ್ವವನ್ನು ಏಕೆ ರದ್ದುಗೊಳಿಸಬಾರದು ಎಂಬುದಕ್ಕೆ ನಿಮ್ಮ ಸೂಕ್ತ ಸಮಜಾಯಿಷಿಯನ್ನು ನೋಟಿಸ್ ತಲುಪಿದ 24 ಘಂಟೆ ಯೊಳಗಾಗಿ ಖುದ್ದು ಹಾಜರಾಗಿ ನೀಡುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಂಗಳವಾರ ಮಲೇಬೆನ್ನೂರು ಪುರಸಭೆ ಸದಸ್ಯರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
December 26, 2024