ಕನಕದಾಸರ ವೃತ್ತದ ಜಾಗದ ವಿವಾದ ಯಥಾಸ್ಥಿತಿಗೆ ಅವಕಾಶ ಕಲ್ಪಿಸಲು ಆಗ್ರಹ

ದಾವಣಗೆರೆ, ಜು.9- ಕೊಪ್ಪಳ ಬಸ್ ನಿಲ್ದಾಣದ ಎದುರು ಕನಕದಾಸರ ವೃತ್ತ ಹಾಗೂ ಕನಕದಾಸರ ಮೂರ್ತಿ ಸ್ಥಾಪನೆಗೆ ಸಂಸದ ಕರಡಿ ಸಂಗಣ್ಣ ಅವರು ಅಡ್ಡಿಪಡಿಸುತ್ತಿರುವುದನ್ನು ದಾವಣಗೆರೆ ಜಿಲ್ಲಾ ಪ್ರದೇಶ ಕುರುಬರ ಯುವ ಘಟಕ ಖಂಡಿಸಿದೆ.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ದಕ್ಷಿಣ ವಲಯ ಯುವ ಘಟಕದ ಅಧ್ಯಕ್ಷ ಬಿ. ಲಿಂಗರಾಜ್ ಮಾತನಾಡಿ, 1988 ರಲ್ಲೇ ಅಂದು ಸಚಿವರಾಗಿದ್ದ ಸಿದ್ಧರಾಮಯ್ಯ ಅವರು, ಕನಕದಾಸರ ವೃತ್ತ ಎಂದು ನಾಮಕರಣ ಮಾಡಿದ್ದರು. ಆದರೆ, ಮೂರ್ತಿ ಪ್ರತಿಷ್ಠಾಪನೆ ನೆನೆಗುದಿಗೆ ಬಿದ್ದಿತ್ತು. ಇದೀಗ ಕುರುಬ ಸಮಾಜ ಪ್ರತಿಷ್ಠಾಪನೆಗೆ ಮುಂದಾ ಗಿದೆ. ಆದರೆ ಸಂಸದ ಕರಡಿ ಸಂಗಣ್ಣ ಅವರು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮುಖಂಡರಾದ ಹಾಲೇಕಲ್ಲು ಎಸ್.ಟಿ. ಅರವಿಂದ್, ಇಟ್ಟಿಗುಡಿ ಮಂಜುನಾಥ್, ಕೆ. ರೇವಣಸಿದ್ಧಪ್ಪ, ಬೀರೇಶ್, ಪರಮೇಶ್ ಮತ್ತಿತರರಿದ್ದರು.

error: Content is protected !!