ಮಲೇಬೆನ್ನೂರು, ಜು.9 – ಕಳಪೆ ಕಾಮಗಾರಿಯಿಂದಾಗಿ ಭದ್ರಾ ಜಲಾಶಯದ ಸೀಲಿಂಗ್ ಬೇಸಿನ್ ಕೊಚ್ಚಿ ಹೋಗಿರುವ ಸ್ಥಳಕ್ಕೆ ಶುಕ್ರವಾರ ಭದ್ರಾ ಅಚ್ಚು-ಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವೈ ದ್ಯಾವಪ್ಪ ರೆಡ್ಡಿ ನೇತೃತ್ವದಲ್ಲಿ ಮಹಾಮಂಡಳದ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿದರು.
2017-18ನೇ ಸಾಲಿನಲ್ಲಿ ಬೆಳಗಾ ವಿಯ ಆದಿತ್ಯ ಕನ್ಸಲೇಟಿಂಗ್ ಕಂಪನಿ ವತಿ ಯಿಂದ ನಿರ್ವಹಿಸಿರುವ ಡ್ಯಾಂ ಸೀಲಿಂಗ್ ಬೇಷನ್ ಕಾಮಗಾರಿ ಮೇಲ್ನೋಟಕ್ಕೆ ಕಳಪೆ ಆಗಿರುವುದು ಕಂಡು ಬಂದಿದೆ.
ಈ ಅವಧಿಯಲ್ಲಿ ಸೇವೆಯಲ್ಲಿದ್ದ ಭದ್ರಾ ಮುಖ್ಯ ಇಂಜಿನಿಯರ್, ಸೂಪರಿಂಟೆಂ ಡೆಂಟ್ ಇಂಜಿನಿಯರ್ ಹಾಗೂ ಇಇ, ಎಇಇ ಅವರನ್ನು ಕೂಡಲೇ ಅಮಾನತ್ತು ಗೊಳಿಸ ಬೇಕು, ಆದಿತ್ಯ ಕನ್ಸಲೇಟಿಂಗ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ರೈತರ ಹಿತ ಕಾಪಾಡ ಬೇಕೆಂದು ದ್ಯಾವಪ್ಪ ರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಹಾಮಂಡಳದ ಉಪಾ ಧ್ಯಕ್ಷ ಆರ್.ಶ್ರೀನಿವಾಸ್, ನಿರ್ದೇಶಕರಾದ ತೇಜಸ್ವಿ ಪಟೇಲ್, ಎಂ.ಚಂದ್ರಪ್ಪ, ದೇವೇಂ ದ್ರಪ್ಪ, ಜಿ.ಪಿ. ಹರೀಶ್, ಪರಮೇಶ್ವರಪ್ಪ, ಮಲ್ಲಿಕಾರ್ಜುನ್ ಈ ವೇಳೆ ಹಾಜರಿದ್ದರು.
ತೀವ್ರ ವಿರೋಧ: ಇದೇ ವೇಳೆ ಭದ್ರಾ ಜಲಾಶಯದಿಂದ ಅಪ್ಪರ್ ಭದ್ರಾ ಕಾಲುವೆೆಗೆ ನೀರು ಹರಿಸುತ್ತಿರುವುದನ್ನು ವೀಕ್ಷಿಸಿದ ಮಹಾಮಂಡಳದ ಪದಾಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.