ದಾಖಲೆಗಳಿದ್ದರೆ ಆರೋಪ ಸಾಬೀತುಪಡಿಸಲಿ : ದೂಡಾ

ದಾಖಲೆಗಳಿದ್ದರೆ ಆರೋಪ ಸಾಬೀತುಪಡಿಸಲಿ : ದೂಡಾ - Janathavaniದಾವಣಗೆರೆ, ಜು.9- ಆವರಗೆರೆ ಸರ್ವೆ ನಂಬರ್ 220 ರಲ್ಲಿ ಅಕ್ರಮವಾಗಿ ಬಡಾವಣೆ ನಿರ್ಮಿಸಲಾಗಿದೆ, ಅಂತಿಮ ವಿನ್ಯಾಸ ನೀಡಲು ಹಣ ಪಡೆದಿದ್ದಾರೆಂಬ ಕಾಂಗ್ರೆಸ್ ಪಾಲಿಕೆ ಸದಸ್ಯರ ಆರೋಪ ಸಾಬೀತುಪಡಿಸಲು ಸೂಕ್ತ ದಾಖಲೆಗಳನ್ನು ನೀಡಲಿ ಎಂದು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಾನು ಹಣ ಪಡೆದು ಬಡಾವಣೆಯ ಅಂತಿಮ ವಿನ್ಯಾಸ ನೀಡಿದ್ದೇನೆ ಎಂದು ನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಆರೋಪಿಸಿರುವುದು ನಿರಾಧಾರ ಮತ್ತು ಸತ್ಯಕ್ಕೆ ದೂರವಾದುದು. ದಾಖಲೆಗಳಿದ್ದರೆ ಬಂದು ಸ್ಥಳ ಪರಿಶೀಲಿಸಲಿ, ಆರೋಪ ಸಾಬೀತುಪಡಿಸಲಿ ಎಂದು ಸವಾಲೆಸೆದರು. ಯಾವುದೇ ಬಡಾವಣೆ ನಿರ್ಮಾಣ ಮಾಡಲು ಅನುಮತಿ ನೀಡಲು ಹತ್ತಾರು ಬಾರಿ ಸ್ಥಳ ಪರಿಶೀಲಿಸಿದ ನಂತರವೇ ಅಂತಿಮ ವಿನ್ಯಾಸ ನೀಡುತ್ತೇವೆ. ನಾನು ಕಾನೂನು ಬಾಹಿರವಾಗಿ ನೀಡಿದ್ದೇನೆ ಎಂಬುದನ್ನು ಸಾಬೀತುಪಡಿಸಲಿ ಎಂದರು.

ಆವರಗೆರೆ ಸರ್ವೆ ನಂಬರ್ ವ್ಯಾಪ್ತಿಯ ಬಡಾವಣೆಗೆ ಮುಖ್ಯರಸ್ತೆಯಿಂದ ಒಳ ರಸ್ತೆಗಳಿಗೆ ಸಂಪರ್ಕವಿಲ್ಲದಿದ್ದರೂ, ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ (2018) ಮೊದಲ ಹಂತದ ಅನುಮತಿ ನೀಡಿದ್ದಾರೆ. 

ಆರೋಪ ಮಾಡುತ್ತಿರುವವರು ಆಗ ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದರು. ಅವರು ಮಾಡಿರುವ ತಪ್ಪನ್ನು ಸರಿಪಡಿಸಿ ಅಂತಿಮ ವಿನ್ಯಾಸ ನೀಡಿದ್ದೇನೆ ಎಂದು ಹೇಳಿದ ಶಿವಕುಮಾರ್,  ಕಾಂಗ್ರೆಸ್ ಸದಸ್ಯರೆೋಬ್ಬರು ದೂಡಾಕ್ಕೆ ಯಾವುದೇ ಶುಲ್ಕ ಪಾವತಿಸದೇ ದೆೋಡ್ಡಬೂದಿಹಾಳ್ ಸರ್ವೇ ನಂಬರ್ 13, 85, 109 ರಲ್ಲಿ ಮತ್ತು ಕರೂರು ಸರ್ವೇ ನಂಬರ್ 47  ರಲ್ಲಿ ಅನಧಿಕೃತ ಬಡಾವಣೆ ನಿರ್ಮಿಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಿಗೆ ಜನಪರ ಕಾಳಜಿ ಇದ್ದರೆ, ಅಂತಹ ಅನಧಿಕೃತ ಬಡಾವಣೆ ತೆೇರವುಗೆೋಳಿಸಲು ಮುಂದಾಗಲಿ. ದೂಡಾದಿಂದ ಅಧಿಕೃತ ಅನುಮತಿ ಪಡೆದು ಬಡಾವಣೆ ನಿರ್ಮಿಸಲಿ, ಇಲ್ಲದಿದ್ದರೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೆೋಡಲಿ ಎಂದು ಒತ್ತಾಯಿಸಿದರು.

ನಗರದ ವಿವಿಧ ಭಾಗಗಳಲ್ಲಿ 100 ಎಕರೆಗೂ ಅಧಿಕ ಪ್ರದೇಶದಲ್ಲಿ ಬಡಾವಣೆಗಳನ್ನು ನಿರ್ಮಿಸಲಾಗುತ್ತಿದ್ದು, ಈಗಾಗಲೇ ನೋಟಿಸ್ ನೀಡಿದ್ದು, ಶೀಘ್ರವೇ ಅಂತಹ ಅನಧಿಕೃತ ಬಡಾವಣೆಗಳ ವಿರುದ್ಧ ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ. ಗೋಣೆಪ್ಪ, ದೂಡಾ ಸದಸ್ಯರಾದ ದೇವೀರಮ್ಮ, ಸೌಭಾಗ್ಯ ಮುಕುಂದ, ಜಯರುದ್ರೇಶ್, ರಾಜು ರೋಖಡೆ ಉಪಸ್ಥಿತರಿದ್ದರು.

error: Content is protected !!