ದಾವಣಗೆರೆ, ಏ.19 – ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿಲ್ಲಾ ಕಚೇರಿ ವತಿಯಿಂದ 2019-20ನೇ ಸಾಲಿನ ವಿಶೇಷ ಕೇಂದ್ರೀಯ ನೆರವಿನಡಿ (ಎಸ್ಸಿಎ ಯಿಂದ ಎಸ್ಸಿಎಸ್ಪಿ) ಜಿಲ್ಲೆಯ ಪರಿಶಿಷ್ಟ ಜಾತಿಯ ನಿರುದ್ಯೋಗ ವಿದ್ಯಾವಂತ ಯುವಕ-ಯುವತಿಯರಿಗೆ ಉಚಿತವಾಗಿ ತರಬೇತಿ ಕಾರ್ಯಕ್ರಮವನ್ನು ದಾವಣಗೆರೆಯ ಕಿಯೋನಿಕ್ಸ್ ಸಂಸ್ಥೆ ಕೇಂದ್ರದಲ್ಲಿ ಏರ್ಪಡಿಸಲಾಗಿದೆ.
ಅಕೌಂಟಿಂಗ್ ಮತ್ತು ಟ್ಯಾಲಿ, ಕಂಪ್ಯೂಟರ್ ಪ್ರೋಗ್ರಾಮರ್ ತರಬೇತಿ, ಕಾಲ್ಸೆಂಟರ್ ತರಬೇತಿ 50 ಅಭ್ಯರ್ಥಿಗಳಿಗೆ. ಕಂಪ್ಯೂಟರೈಸ್ಡ್ ಫ್ಯಾಷನ್ ಡಿಸೈನಿಂಗ್ ಹಾಗೂ ಟೈಲರಿಂಗ್ ತರಬೇತಿ 44 ಅಭ್ಯರ್ಥಿಗಳಿಗೆ. ಡಿಜಿಟಲ್ ಮಾರ್ಕೆಟಿಂಗ್ 110 ಜನ, ಸೈಬರ್ ಸೆಕ್ಯೂರಿಟಿ-100, ಹಾಗೂ 250 ಅಭ್ಯರ್ಥಿಗಳಿಗೆ ಆಂಡ್ರಾಯಿಡ್ ಟ್ರೈನಿಂಗ್ (ಸ್ಮಾರ್ಟ್ ಮೊಬೈಲ್ ಫೋನ್) ತರಬೇತಿ ಉಚಿತವಾಗಿ ಆಯೋಜಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿಗಳನ್ನು ಏ.9 ರಿಂದ ಅಂಬೇಡ್ಕರ್ ನಿಗಮದ ಜಿಲ್ಲಾ ಕಚೇರಿಯಲ್ಲಿ ಉಚಿತವಾಗಿ ವಿತರಿಸಲಾಗುತ್ತಿದ್ದು, ಭರ್ತಿ ಮಾಡಿದ ಅರ್ಜಿಯನ್ನು ಏ.30 ರೊಳಗೆ ಅಗತ್ಯ ಶೈಕ್ಷಣಿಕ ಅಂಕ ಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ನೊಂದಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ನಂ.337/16ಎ-16 ಗಣೇಶ್ ಲೇಔಟ್ 1ನೇ ಕ್ರಾಸ್, ಪಿ.ಬಿ.ರಸ್ತೆ, ದಾವಣಗೆರೆ. ದೂರವಾಣಿ ಸಂಖ್ಯೆ: 08192-258647 ಕ್ಕೆ ಸಂಪರ್ಕಿಸಬಹುದು ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.