ದಾವಣಗೆರೆ, ಜು.8- ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ಸೇರಿ ಜಿಲ್ಲೆಯ ಐವರು ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿಗಳು 2019ರ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ, ಜಗಳೂರಿನ ಅಗ್ನಿಶಾಮಕ ಠಾಣೆಯ ಲೀಡಿಂಗ್ ಫೈರ್ ಮನ್ ಗಳಾದ ಕೆ. ರೇವಣಸಿದ್ದಪ್ಪ, ಜಿ.ಪಿ. ರಾಮನಾಥ, ಹರಪನಹಳ್ಳಿ ತಾಲ್ಲೂಕು ಸಿಂಗ್ರಿಹಳ್ಳಿ ದೊಡ್ಡ ತಾಂಡಾದ ದಾವಣಗೆರೆ ಅಗ್ನಿಶಾಮಕ ಠಾಣೆಯ ಫೈರ್ ಮನ್ ಗಳಾದ ಅಶೋಕ ನಾಯ್ಕ್ ಮತ್ತು ಎಸ್.ಕೆ. ರಾಜೇಶ್ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದವರು.
ಸೇವೆಯಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಸಿಎಂ ಪದಕ ನೀಡು ತ್ತಿದ್ದು, ಇದೇ ದಿನಾಂಕ 13ರಂದು ನಡೆಯುವ ಸಮಾರಂಭದಲ್ಲಿ ಪುರಸ್ಕೃತರಿಗೆ 5 ಸಾವಿರ ಪ್ರೋತ್ಸಾಹ ಧನ, ಪದಕ ಪ್ರದಾನ ಮಾಡಲಾಗುತ್ತದೆ.
ಬಸವಪ್ರಭು ಶರ್ಮ 2018ರಲ್ಲಿ ಧಾರವಾಡ ದಲ್ಲಿ ಕಟ್ಟಡ ಕುಸಿತದಲ್ಲಿ ಹಲವರ ರಕ್ಷಣೆ, ಹರಿ ಹರದ ತುಂಗಭದ್ರಾ ನದಿ ತೀರದಲ್ಲಿ ಪ್ರವಾಹ ಉಂಟಾ ದಾಗ ಕೋತಿಗಳ ರಕ್ಷಣೆ, ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಫ್ಯಾಕ್ಟರಿಗೆ ಹಾಗೂ ಪೇಂಟ್ ಅಂಗಡಿಗೆ ಬೆಂಕಿ ಬಿದ್ದಾಗ ನಂದಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.