ಅಲ್ಪಸಂಖ್ಯಾತರಿಗೆ ಶೇ. 12 ರಷ್ಟು ಮೀಸಲಾತಿ ನೀಡಲು ಆಗ್ರಹ

ದಾವಣಗೆರೆ, ಫೆ.15- ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಅಲ್ಪಸಂಖ್ಯಾತರಿಗೆ ಶೇ. 12 ರಷ್ಟು ಮೀಸಲಾತಿ ನೀಡುವಂತೆ ಅಲ್ಪಸಂಖ್ಯಾತರ ಹಿತರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎ.ಆರ್‌. ಅಯಾಜ್‌ ಹುಸೇನ್ ಒತ್ತಾಯಿಸಿದ್ದಾರೆ.

ಅಲ್ಪಸಂಖ್ಯಾತರ ಸರ್ವತೋಮುಖ ಅಭಿವೃದ್ಧಿಗೆ ಮೀಸಲಾತಿ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಸರ್ಕಾರವನ್ನು ಆಗ್ರಹಿ ಸಿದರು. ನೆನೆಗುದಿಗೆ ಬಿದ್ದಿರುವ ಸಾಚಾರ್‌ ಹಾಗೂ ಡಾ. ರಂಗನಾಥ್‌ ಮಿಶ್ರ ವರದಿ ಜಾರಿಗೊಳಿಸಬೇಕು. ಸರ್ಕಾರ ಅಲ್ಪಸಂಖ್ಯಾತರಿಗೆ ನಿಗದಿಪಡಿಸಿದ ಅನುದಾನವನ್ನು ಕಡಿತಗೊಳಿಸಿದೆ. 2018 ರಿಂದ ಇದುವರೆಗೂ ವಿದ್ಯಾರ್ಥಿ ವೇತನ ನೀಡದೇ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಕ್ರಿಯಾ, ಮಹಮ್ಮದ್‌ ಜಿಯಾವುಲ್ಲಾ, ಹೆಚ್‌.ಸಿ. ದಾದಾಪೀರ್‌, ಎಂ. ದಾದಾಪೀರ್‌, ಡೋ. ಅಸ್ಲಂಖಾನ್ ಮತ್ತಿತರರಿದ್ದರು.

error: Content is protected !!