ರಾಣೇಬೆನ್ನೂರು, ಜು.6- ಪ್ರಧಾನಿ ಮೋದಿ ಅವರು ಧರ್ಮ, ದೇವರು, ದೇಶದ ಹೆಸರು ಹೇಳಿ ದೇಶದ ಜನತೆಗೆ ಭಾರೀ ಅನ್ಯಾಯ ವೆಸಗುತ್ತಿದ್ದು, ಕಾಂಗ್ರೆಸ್ ಪಕ್ಷ ಅದನ್ನು ಪ್ರತಿಭಟಿಸುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೋಳಿವಾಡ ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದರು.
ಮೋದಿ ಅವರ 7 ವರ್ಷಗಳ ಆಡಳಿತದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಬೇಳೆ ಕಾಳು, ಎಣ್ಣೆ ಹೀಗೆ ಜನರ ಅವಶ್ಯಕತೆಯ ಎಲ್ಲ ಸಾಮಗ್ರಿಗಳ ಬೆಲೆ ಪ್ರತಿ ದಿನ ಹೆಚ್ಚಾಗುತ್ತಿದೆ. ದೇಶದ ಯಾವೊಬ್ಬ ಪ್ರಜೆಗೂ ಒಳಿತಾಗಿಲ್ಲ. ಬಡವ ಶ್ರೀಮಂತ ರಾದಿಯಾಗಿ ಎಲ್ಲರೂ ಮೋದಿಯವರಿಗೆ ಶಾಪ ಹಾಕುತ್ತಿದ್ದಾರೆ ಎಂದು ಪ್ರಕಾಶ್ ಕಿಡಿಕಾರಿ ದರು. ಜನತೆಗೆ ಆಗುತ್ತಿ ರುವ ಘನಘೋರ ಅನ್ಯಾಯವನ್ನು ಖಂಡಿಸಿ, ನಾಳೆ ದಿನಾಂಕ 7ರ ಬುಧವಾರ ರಾಜ್ಯಾದ್ಯಂತ ಸೈಕಲ್ ರಾಲಿ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರಕಾಶ್ ವಿವರಿಸಿದರು.
ಪ್ರಕಾಶ್ ಜೊತೆಗೆ ನಗರ, ಗ್ರಾಮೀಣ ಅಧ್ಯಕ್ಷರಾದ ಶೇರು ಕಾಬೂಲಿ, ಮಂಜನಗೌಡ ಪಾಟೀಲ, ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ನಗರಸಭೆ ಸದಸ್ಯ ಮರಿ ಯಮ್ಮನವರ ಪುಟ್ಟಪ್ಪ, ಬಸನಗೌಡ ಮರದ ಮತ್ತಿತರರಿದ್ದರು.
ರಾಮ್ ದೇವ್ ರಾದ್ಧಾಂತ ! : ಪ್ರಧಾನಿ ಮೋದಿಯವರ ಅತ್ಯಂತ ಆತ್ಮೀಯರಾದ ಬಾಬಾ ರಾಮ್ ದೇವ್ ಅವರು ಬೀಟ್ರೂಟ್ ಮುಂತಾದವುಗಳಿಂದ ಚೈನಾದಲ್ಲಿ ತಯಾರಿಸಲಾದ ಸಕ್ಕರೆ ಸಿರಪ್ ಅನ್ನು ತರಿಸಿ, ಜೇನುತುಪ್ಪದಲ್ಲಿ ಬೆರೆಸಿ ಪತಂಜಲಿ ಮೂಲಕ ಜನತೆಗೆ ಮಾರಾಟ ಮಾಡಿ ದೇಶವನ್ನೇ ವಂಚಿಸಿರುವುದು ಬೆಳಕಿಗೆ ಬಂದಿದೆ. 8 ಕಂಪನಿಗಳ ತಯಾರಿಕೆಯನ್ನು ಜರ್ಮನಿಗೆ ಕಳುಹಿಸಿ ಪರೀಕ್ಷಿಸಿದ್ದು, ಪತಂಜಲಿ ಸೇರಿದಂತೆ 5 ಕಂಪನಿಯವರು ಈ ವಂಚನೆಯಲ್ಲಿರುವುದಾಗಿ ಹೇಳಲಾಗುತ್ತಿದೆ ಎಂದು ಪ್ರಕಾಶ ಕೋಳಿವಾಡ ಹೇಳಿದರು.