ದಾವಣಗೆರೆ, ಜು.6- ಮಾಯಕೊಂಡ ಹೋಬಳಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಯಕೊಂಡಪುರ ಅಭಿವೃದ್ಧಿ ಕ್ರಿಯಾಶೀಲ ವೇದಿಕೆ ಹಾಗೂ ಮಾಯಕೊಂಡ ತಾಲ್ಲೂಕು ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದೆ. ಈಗಾಗಲೇ ಕಂದಾಯ ಸಚಿವ ಆರ್. ಅಶೋಕ್ ಅವರಿಂದ ನಿಮಗೆ ಪತ್ರ ಬಂದಿದ್ದು, ಶಿಫಾರಸ್ಸು ಪತ್ರ ನೀಡಿದಲ್ಲಿ ಮಾಯಕೊಂಡ ತಾಲ್ಲೂಕಾಗಿ ಸೇರ್ಪಡೆಯಾಗಲಿದೆ. ಮಾಯಕೊಂಡ ಜನತೆ ತಮ್ಮಲ್ಲಿ ಭರವಸೆ ಇರಿಸಿದ್ದು, ಶೀಘ್ರವೇ ಈ ಕಾರ್ಯವನ್ನು ಮಾಡಿಕೊಡುವಂತೆ ಮನವಿ ಮಾಡುವುದಾಗಿ ವೇದಿಕೆ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ತಿಳಿಸಿದ್ದಾರೆ.
December 28, 2024