ಜಗಳೂರು ಪಿಎಲ್‍ಡಿ ಬ್ಯಾಂಕಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ; ವಸೂಲಾತಿಯಲ್ಲಿ ಉತ್ತಮ ಪ್ರಗತಿ

ಜಗಳೂರು, ಫೆ.12 – ಬರಗಾಲ, ಅಸಮರ್ಪಕ ಬೆಳೆಯಂತಹ ಭೀಕರ ಪರಿಸ್ಥಿತಿಯಲ್ಲೂ ಸಹ ಜಗಳೂರು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ನಿಯಮಿತ ಸದರಿ ಬ್ಯಾಂಕಿನ ಅಧ್ಯಕ್ಷರು ಮತ್ತು ಸಿಬ್ಬಂದಿ ವರ್ಗ ಸಾಲ ವಸೂಲಾತಿ ಮಾಡಿ , ಉತ್ತಮ ಪ್ರಗತಿಯನ್ನು ಸಾಧಿಸುವ ಮೂಲಕ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಜೆ.ಎಸ್. ಮಲ್ಲಿಕಾರ್ಜುನ್ ಬಾಬು ತಿಳಿಸಿದ್ಧಾರೆ.

ಬ್ಯಾಂಕಿನ ಅಧ್ಯಕ್ಷ ಜೆ.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ತಾಲ್ಲೂಕಿನಲ್ಲಿ ಸುಮಾರು 70 ವರ್ಷಗಳ ಇತಿಹಾಸವನ್ನು ಪಿಎಲ್‍ಡಿ ಬ್ಯಾಂಕ್ ಹೊಂದಿದೆ. ತಾಲ್ಲೂಕಿನಾದ್ಯಂತ ಸಮೃದ್ಧ ಮಳೆ, ಬೆಳೆ ಇಲ್ಲದ ಹಿನ್ನೆಲೆಯಲ್ಲೂ ಬ್ಯಾಂಕಿನ ಸಾಲ ವಸೂಲಾತಿ ನಿಗದಿತ ಗುರಿ ಮುಟ್ಟಿರಲಿಲ್ಲ. ಬ್ಯಾಂಕ್ ಆರ್ಥಿಕ ಸಂಕಷ್ಟವನ್ನು ಎದುರಿಸುವ ಸ್ಥಿತಿ ತಲುಪಿತ್ತು. ಸರಕಾರ ರೈತರ ಸಾಲ ತೀರುವಳಿಗಾಗಿ ವಿಶೇಷ ಪ್ಯಾಕೇಜ್ ನೀಡಿದ್ದರಿಂದ ಬ್ಯಾಂಕಿನ ಅಧ್ಯಕ್ಷ, ಉಪಾಧ್ಯಕ್ಷರು, ನಿರ್ದೇಶಕರುಗಳು, ವ್ಯವಸ್ಥಾಪಕರುಗಳು ಮತ್ತು ಸಿಬ್ಬಂದಿ ವರ್ಗದ ಸಹಾಯದಿಂದ ಸರ್ಕಾರದ ಪ್ಯಾಕೇಜ್ ತಿಳಿಸುವ ಮೂಲಕ ರೈತರಿಂದ ಸಾಲ ವಸೂಲಾತಿ ಮಾಡಲಾಯಿತು. ಇದನ್ನು ತಾಲ್ಲೂಕಿನ ಬಹುತೇಕ ರೈತರು ಸದುಪಯೋಗ ಪಡಿಸಿಕೊಂಡಿದ್ದು ನನಗೆ ಸಂತಸ ತಂದಿದೆ ಎಂದರು.

ಈಗಾಗಲೇ ಹಿಂದಿನ ಸಾಲಿನಲ್ಲಿ ಸುಮಾರು 1.25 ಕೋಟಿ ಹಾಗೂ ಪ್ರಸಕ್ತ ಸಾಲಿನಲ್ಲಿ 2.00 ಆರ್ಥಿಕ ಹಂಚಿಕೆ ಮಾಡಲಾಗುತ್ತಿದ್ದು. ರಾಜ್ಯ ಬ್ಯಾಂಕ್ ಹಾಲಿ ಸಾಲ ನೀಡುವ ಮಾರ್ಗದರ್ಶನ ಗಳನ್ನು ಬದಲಾಯಿಸಿಕೊಂಡು ಹೆಚ್ಚಿನ ಸಾಲ ಸೌಕರ್ಯ ನೀಡಬೇಕು. ಬ್ಯಾಂಕಿನ ಪ್ರಗತಿಗೆ ಮುಖ್ಯವಾಗಿ ರೈತ ಸದಸ್ಯರಿದ್ದು. ಈ ಕೀರ್ತಿ ಸದರಿ ಸಾಲಗಾರ ರೈತರಿಗೆ ಸಮರ್ಪಿಸಿದ್ದು. ಬ್ಯಾಂಕಿನ ಸಾಲಗಾರರು ಸಾಲದ ಕಂತುಗಳನ್ನು ಕಾಲಕಾಲಕ್ಕೆ ಪಾವತಿಸಲು ಮನವಿ ಮಾಡಿದರಲ್ಲದೇ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸುವ ಅಭಿಲಾಷೆ ಹೊಂದಿರುವುದಾಗಿ ಅವರು ತಿಳಿಸಿದರು.

ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಸಾಲ ವಸೂಲಾತಿಯಲ್ಲಿ ಉತ್ತಮ ಪ್ರಗತಿ ತೋರಿ ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆದ ಜಗಳೂರು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ನಿಯಮಿತ ಸದರಿ ಬ್ಯಾಂಕಿನ ಅಧ್ಯಕ್ಷರು, ಕಾರ್ಯದರ್ಶಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬೆಂಗಳೂರಿನ ಜಿಲ್ಲಾ ನಿರ್ದೇಶಕಿ ಶೋಭಾ ಉಮೇಶ್‍, ನಬಾರ್ಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕಿ ಕವಿತಾ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಎಲ್ಲಾ ಅಧ್ಯಕ್ಷರುಗಳು, ಜಿಲ್ಲಾ ವ್ಯವಸ್ಥಾಪಕರು, ಬ್ಯಾಂಕಿನ ಸಿಬ್ಬಂದಿಗಳು, ಜಗಳೂರು ಪಿಕಾರ್ಡ್‍ ಬ್ಯಾಂಕಿನ ಉಪಾಧ್ಯಕ್ಷೆ ಚೌಡಮ್ಮ, ವ್ಯವಸ್ಥಾಪಕ ನಾಗಭೂಷಣ, ಬ್ಯಾಂಕಿನ ಎಲ್ಲಾ ನಿರ್ದೇಶಕರುಗಳು ಉಪಸ್ಥಿತರಿದ್ದರು.

error: Content is protected !!