ಕ್ಯಾಂಪಸ್ ಸಂದರ್ಶನ : ಜಿ.ಎಂ.ಐ.ಟಿ ಮೆಕ್ಯಾನಿಕಲ್ ವಿದ್ಯಾರ್ಥಿಗಳ ಆಯ್ಕೆ

ದಾವಣಗೆರೆ, ಏ. 16- ನಗರದ ಪ್ರತಿಷ್ಠಿತ ಜಿ.ಎಂ.ತಾಂತ್ರಿಕ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ಕೊನೆಯ ವರ್ಷದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಮೆಕ್ಯಾನಿಕಲ್‍ ಕೋರ್ ಕಂಪನಿಗಳಾದ ಬಿಲ್ ಪೋರ್ಜ್, ಮಹಿಂದ್ರಾ ಸಿಐಇ, ಸೊಗಪಿ, ಮೈನಿ ಏರೋಸ್ಪೇಸ್, ಮಿಲ್ ಟೆಕ್ ಮುಂತಾದ ಹಲವು ಕಂಪನಿಗಳಿಗೆ ನಡೆದ ಸಂದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ 95 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ.ಆರ್., ಕಾಲೇಜಿನ ಪ್ರಾಂಶುಪಾಲ ಡಾ. ವೈ ವಿಜಯಕುಮಾರ್ ಅವರು ತಿಳಿಸಿದ್ದಾರೆ.

error: Content is protected !!