ಕನ್ನಡ ಜಾನಪದ ನೃತ್ಯ ಸ್ಪರ್ಧೆ

ದಾವಣಗೆರೆ, ಫೆ.14- ಸ್ಥಳೀಯ ವಿದ್ಯಾನಗರ-ವಿನಾಯಕ ಬಡಾವಣೆಯ ವಿನೂತನ ಮಹಿಳಾ ಸಮಾಜದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಾರ್ಚ್‌ 17 ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಜಾನಪದ ನೃತ್ಯ ಸಂಭ್ರಮ ಕಾರ್ಯಕ್ರಮ ನಡೆಯಲಿದ್ದು, ಅಂದು ಕರ್ನಾಟಕ ಜಾನಪದ ನೃತ್ಯ ಸ್ಪರ್ಧೆಯನ್ನೂ ಸಹ ಏರ್ಪಡಿಸಲಾಗಿದೆ.

20 ವರ್ಷ ಮೇಲ್ಪಟ್ಟ ಮಹಿಳೆಯರು ಭಾಗವಹಿಸಲು ಅವಕಾಶವಿದೆ. ಆಸಕ್ತರು 94800 65748 ಅಥವಾ 96638 23664 ಕ್ಕೆ ಕರೆ ಮಾಡಿ ಹೆಸರು ನೋಂದಾಯಿಸುವಂತೆ ಶ್ರೀಮತಿ ರೇಖಾ ಓಂಕಾರಪ್ಪ ಕೋರಿದ್ದಾರೆ.

 

error: Content is protected !!