ದಾವಣಗೆರೆ, ಏ.15- ತಾಲ್ಲೂಕಿನ ಮುಡೇನಹಳ್ಳಿಯಲ್ಲಿ ದುಷ್ಕರ್ಮಿಗಳು ಫಲಕ್ಕೆ ಬಂದಿದ್ದ ನೂರಾರು ಅಡಿಕೆ ಮರಗಳನ್ನು ಕಡಿದು ಪರಾರಿಯಾಗಿದ್ದಾರೆ. ಇದ ರಿಂದ ರೈತ ದಿಕ್ಕು ತೋಚದಂತಾ ಗಿದ್ದಾನೆ. ಆನಗೋಡು ಸಮೀಪದ ಮುಡೇನಹಳ್ಳಿಯ ಎನ್.ಬಸವ ರಾಜಪ್ಪ ಎಂಬುವವರು ಸೇರಿದಂತೆ ನಾಲ್ಕು ರೈತರಿಗೆ ಸೇರಿದ ಸುಮಾರು 100ಕ್ಕೂ ಹೆಚ್ಚು ಮರಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ತಡ ರಾತ್ರಿ ಬಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾರೆ.
April 11, 2025