ದಾವಣಗೆರೆ,ಜು.5- ಜಮೀನಿನ ವಿಚಾರದಲ್ಲಿ ತನ್ನ ಸಹೋದರ ಸೇರಿದಂತೆ ಮೂವರು ತನ್ನ ಮತ್ತು ತನ್ನ ಮಗನ ಮೇಲೆ ನಿಂದನೆ ಮಾಡಿದ್ದಲ್ಲದೇ, ಹಲ್ಲೆ ನಡೆಸಿದ್ದಾರೆ ಎಂದು ನೀರ್ಥಡಿ ಗ್ರಾಮದ ಎನ್.ಎಸ್. ಶಿವಕುಮಾರ್ ಆರೋಪಿಸಿದ್ದಾರೆ.
2021, ಜೂನ್ 23 ರಂದು ಈ ಹಲ್ಲೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಎನ್.ಎಸ್. ವೀರಯ್ಯ, ವಾಗೀಶ್ ಮತ್ತು ಹಾಲಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾಯಕೊಂಡ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅವರು ಕೇಳಿಕೊಂಡಿದ್ದಾರೆ.