ಸೂರಗೊಂಡನಕೊಪ್ಪ : ನಾಡಿದ್ದು ಸಂತ ಸೇವಾಲಾಲರ ಜಯಂತಿ

ದಾವಣಗೆರೆ, ಫೆ.10- ನ್ಯಾಮತಿ ತಾಲ್ಲೂಕು (ಭಾಯಾಗಡ) ಸೂರಗೊಂಡನ ಕೊಪ್ಪದಲ್ಲಿ ಸಂತ ಸೇವಾಲಾಲ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಇದೇ ದಿನಾಂಕ 13, 14 ಹಾಗೂ 15 ರಂದು ಸಂತ ಸೇವಾಲಾಲರ 282ನೇ ಜಯಂತ್ಯುತ್ಸವ ಹಾಗೂ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಮಾಜಿ ಸಚಿವರೂ, ಸಮಿತಿ ಅಧ್ಯಕ್ಷರೂ ಆದ ರುದ್ರಪ್ಪ ಮಾನಪ್ಪ ಲಮಾಣಿ ಅವರು ನಿನ್ನೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಜಾತ್ರಾ ಮಹೋತ್ಸವದ ಅಂಗವಾಗಿ ಯುವಜನ ಉತ್ಸವ, ಸಮುದಾಯದ ಸಮಸ್ಯೆ ಸವಾಲುಗಳು ಕುರಿತು ವೈಚಾರಿಕ ಚಿಂತನೆಯ ತಳಹದಿ ಮೇಲೆ ವಿಚಾರಗೋಷ್ಠಿ ನಡೆಯಲಿದೆ. ಫೆ.13 ರಂದು ಬೆಳಿಗ್ಗೆ ಸಂಪ್ರ ದಾಯದಂತೆ ತಾಂಡಾಗಳ ಮುಖಂಡರಿಂದ ಕುಂಭಮೇಳ ಕಾಟೇಲುತ್ಸವ ನಡೆಯಲಿದೆ.

ಬೆಳಿಗ್ಗೆ 9 ಕ್ಕೆ ದಾಸೋಹ ಪ್ರಾರಂಭ. ಪೂರ್ವೋತ್ತರ ಬಂಜಾರ ಸಾಧುಸಂತರಿಂದ ಧರ್ಮಸಭೆ , 11 ಕ್ಕೆ ವೇದಿಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 

ಇದೇ ದಿನಾಂಕ 14 ರಂದು ಬೆಳಗಿನ ಜಾವ 4.30 ಕ್ಕೆ ದೂದಿಯಾ ತಳಾವ್ ತೀರ್ಥದೊಂದಿಗೆ ಶ್ರೀ ಮರಿಯಮ್ಮ ಮತ್ತು ಸಂತ ಸೇವಾಲಾಲ ಮಹಾರಾಜರ ಮಹಾಭಿಷೇಕ, ವಿಶೇಷ ಅಲಂಕಾರ, ಬೆಳಿಗ್ಗೆ 10 ಕ್ಕೆ ವಿಚಾರಗೋಷ್ಠಿ, ನಾಡಿನ ಚಿಂತಕರು, ಸಾಹಿತಿಗಳು, ಹೋರಾಟಗಾರರು, ಕಾನೂನು ತಜ್ಞರು, ಸಮಾಜ ಸುಧಾರಕರು ಭಾಗವಹಿಸಲಿದ್ದಾರೆ ಎಂದರು.

ಸೂರಗೊಂಡನಕೊಪ್ಪ : ನಾಡಿದ್ದು ಸಂತ ಸೇವಾಲಾಲರ ಜಯಂತಿ - Janathavaniಸಂತ ಸೇವಾಲಾಲರ ಮ್ಯೂಸಿಯಂ ಶೀಘ್ರ ಸ್ಥಾಪನೆಗೆ ನಿರ್ಧಾರ

ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲರ ಮ್ಯೂಸಿಯಂ ಸ್ಥಾಪಿಸುವ ಉದ್ದೇಶವಿದೆ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು. ಇದರೊಟ್ಟಿಗೆ ವಸತಿ ಶಾಲೆ, ಗಾರ್ಮೆಂಟ್ಸ್ ಇನ್ನಿತರೆ ಸಮಾಜೋಪ ಯೋಗಿ ಅಭಿವೃದ್ಧಿ ಕೇಂದ್ರಗಳನ್ನು ತೆರೆಯಲು ಈಗಾಗಲೇ ಮದ್ಯವರ್ಜನೆ ಕೇಂದ್ರದ ಮೂಲಕ ಮದ್ಯವ್ಯಸನಿಗಳಿಗೆ ತರಬೇತಿ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ತಾಂಡಾಗಳು ಇನ್ನೂ ಸುಧಾರಣೆಯಾಗುತ್ತಿಲ್ಲ. ಕೆಲಸ ಅರಸಿ ಜನ ವಲಸೆ ಹೋಗುತ್ತಿದ್ದಾರೆ. ಯುವ ಪದವೀಧರರಿಗೆ ಉದ್ಯೋಗ ಸಿಗದಂ ತಾಗಿದೆ. ತಾಂಡಾ ಅಭಿವೃದ್ಧಿ ನಿಗಮಕ್ಕೆ ಅನುದಾನ ಕೂಡ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಸಚಿವ ಬಿ. ಶ್ರೀರಾಮುಲು ಪುಷ್ಪಾರ್ಚನೆ ಮಾಡಲಿದ್ದಾರೆ. ಸಚಿವ ಬಿ.ಎ. ಬಸವರಾಜ್ ಸಭಾ ಮಂಟಪ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಸೇರಿದಂತೆ ಸಚಿವರು, ಸಂಸದರು, ಶಾಸಕರು ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ದಿನಾಂಕ 15 ರಂದು ಬೆಳಿಗ್ಗೆ 8.45 ಕ್ಕೆ ಮಹಾಭೋಗ್‌ ನಡೆಯಲಿದ್ದು, ರಾಜ್ಯ, ಅಂತರರಾಜ್ಯ, ದೇಶ-ವಿದೇಶಗಳಿಂದ ಸಂತ ಸೇವಾಲಾಲ್ ಭಕ್ತರು ಆಗಮಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ರಾಘವೇಂದ್ರ ನಾಯಕ್, ಎನ್. ಜಯದೇವನಾಯ್ಕ, ಡಿ. ತಾವರನಾಯ್ಕ, ಮಂಜಾನಾಯ್ಕ, ಕಾಶೀನಾಥ್ ಇನ್ನಿತರರಿದ್ದರು.

error: Content is protected !!