ದಾವಣಗೆರೆ, ಏ.14- ನಗರದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ (ಪವರ್ ಲಿಫ್ಟಿಂಗ್) ಬೆಂಚ್ ಪ್ರೆಸ್‌ನಲ್ಲಿ ಬಿರೇಶ್ವರ ವ್ಯಾಯಾಮ ಶಾಲೆಯ ಕ್ರೀಡಾಪಟು ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಉದ್ಯೋಗಿ ವಿ. ರಕ್ಷಿತ್ 93 ಕೆ.ಜಿ. ವಿಭಾಗದಲ್ಲಿ ಭಾಗವಹಿಸಿ 140 ಕೆ.ಜಿ. ಭಾರ ಎತ್ತಿ ಬೆಳ್ಳಿ ಪದಕ ಪಡೆದಿದ್ದಾರೆ. ಇವರನ್ನು ಬ್ಯಾಂಕಿನ ಅಧ್ಯಕ್ಷ ಆರ್.ಜಿ. ಶ್ರೀನಿವಾಸ ಮೂರ್ತಿ, ಉದ್ಯಮಿ ಡಾ. ರವಿ ಇಳಂಗೋ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶ ವಂತರಾವ್ ಜಾಧವ್, ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಹೆಚ್. ದಾದಾಪೀರ್, ಜೆ.ಎನ್. ಶ್ರೀನಿವಾಸ್, ಉದ್ಯಮಿ ಗೋಪಾಲರಾವ್ ಮಾನೆ, ಬಾಬಣ್ಣ, ಗಿರಿಯಪ್ಪ, ಬಳ್ಳಾರಿ ಷಣ್ಮುಖಪ್ಪ ಮತ್ತಿತರರು ಅಭಿನಂದಿಸಿದ್ದಾರೆ.
December 26, 2024