ದಾವಣಗೆರೆ, ಏ.14- ರಾಜ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿಯು ನಾಳೆ ದಿನಾಂಕ 15 ರಿಂದ 29ರವರೆಗೆ ಆರೋಗ್ಯ ಕುರಿತ ಉಪನ್ಯಾಸ ಮಾಲಿಕೆ ‘ಆರೋಗ್ಯ ಸಂಸ್ಕೃತಿ’ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ನವಜಾತ ಶಿಶು ಮತ್ತು ಮಕ್ಕಳ ತಜ್ಞ ಡಾ. ಜಿ. ಗುರುಪ್ರಸಾದ್ ಅವರು ಮಕ್ಕಳ ಆರೋಗ್ಯ ಕುರಿತಂತೆ ನಾಡಿದ್ದು ದಿನಾಂಕ 16ರಂದು ಉಪನ್ಯಾಸ ನೀಡಲಿದ್ದಾರೆ. ಅಕಾಡೆಮಿಯ ಯೂಟ್ಯೂಬ್ ಮತ್ತು ಫೇಸ್ ಬುಕ್ ಚಾನೆಲ್ ಮೂಲಕ ಪ್ರತಿದಿನ ಸಂಜೆ 4.30 ರಿಂದ 6.30 ರವರೆಗೆ 15 ದಿನಗಳ ಕಾಲ ವಿವಿಧ ಕ್ಷೇತ್ರಗಳ ತಜ್ಞರು ಉಪನ್ಯಾಸ ನೀಡಲಿದ್ದು, ಅದರ ನೇರ ಪ್ರಸಾರವಾಗಲಿದೆ.
April 11, 2025