ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಶ್ರೀ ರಂಭಾಪುರಿ ಮಹಾ ಪೀಠವನ್ನು ಆರೋಹಣ ಮಾಡಿ 30ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಹಾಗೂ ಶ್ರೀ ಜಗದ್ಗುರುಗಳವರು ತಮ್ಮ 65ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಹಿನ್ನೆಲೆಯಲ್ಲಿ ರಂಭಾಪುರಿ ಧರ್ಮ ಪೀಠದಲ್ಲಿ ಇಂದಿನಿಂದ ಇದೇ ದಿನಾಂಕ 14ರ ವರೆಗೆ ಶತರುದ್ರಯಾಗ ಜರುಗಲಿದೆ.
ಈ ಕಾರ್ಯಕ್ರಮದ ಅಂಗವಾಗಿ ಪ್ರತಿನಿತ್ಯ ಪ್ರಾತಃಕಾಲ ಲಿಂಗೋದ್ಭವ ಶ್ರೀ ಜಗದ್ಗುರು ರೇಣುಕಾಚಾರ್ಯರ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶ್ರೀ ಸೋಮೇಶ್ವರ ಮಹಾಲಿಂಗ, ಶ್ರೀ ಮಹಾಗಣಪತಿ, ಶ್ರೀ ಪಾರ್ವತಿ, ಶ್ರೀ ಚೌಡೇಶ್ವರಿ, ಶ್ರೀ ಭದ್ರಕಾಳಿ ಅಮ್ಮನವರ ಹಾಗೂ ವೀರಾಂಜನೇಯ ಮಹಾಮೂರ್ತಿಗಳಿಗೆ ಮತ್ತು ಲಿಂಗೈಕ್ಯ ಜಗದ್ಗುರುಗಳವರ ಗದ್ದುಗೆಗಳಿಗೆ ರುದ್ರಾಭಿಷೇಕ, ಅಷ್ಟೋತ್ತರ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಲ ವಿಶೇಷ ಪೂಜೆ ಜರುಗುವುದು. ನಾಡಿನಲ್ಲಿ ಶಾಂತಿ ನೆಲೆಗೊಳ್ಳಬೇಕು. ಜನರ ಭಾವನೆಗಳು ತಿಳಿಗೊಳ್ಳಬೇಕು. ಧರ್ಮ ಸಂಸ್ಕೃತಿ ಪುನರುತ್ಥಾನಗೊಳ್ಳಬೇಕೆಂಬ ಸದುದ್ಧೇಶ ದಿಂದ ಈ ಪೂಜಾ ಸಮಾರಂಭವನ್ನು ಸಾಂಕೇತಿಕವಾಗಿ ಹಮ್ಮಿಕೊಳ್ಳಲಾಗಿದೆ.
ಇದೇ ದಿನಾಂಕ 14ರ ರವಿವಾರ ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 30ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋತ್ಸವ, ಧರ್ಮ ಸಮಾರಂಭ ನಡೆಯುವುದು. ಅಂದು ಪರಂಪರೆಯಿಂದ ಬಂದ ವೀರ ಸಿಂಹಾಸನವನ್ನು ಪೂಜಿಸಿ ಶ್ರೀ ಜಗದ್ಗುರುಗಳವರು ಪೀಠಾರೋಹಣ ಮಾಡಿ ಶಾಂತಿ ಸಾಮರಸ್ಯದ ಸಂದೇಶ ನೀಡುವರು.