ಹರಿಹರ, ಏ.9- ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲೊಂದಾದ ನಗರದ ದಿ ತುಂಗಭದ್ರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಮುಕ್ತಾಯಗೊಂಡ ಆರ್ಥಿಕ ವರ್ಷ 2020-21 ನೇ ಸಾಲಿನಲ್ಲಿ 3.32 ಕೋಟಿ ರೂ. ಲಾಭ ಗಳಿಸಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಡಿ. ಹೇಮಂತ್ ರಾಜ್ ತಿಳಿಸಿದ್ದಾರೆ.
ಸೊಸೈಟಿಯ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೇಮಂತ್ ರಾಜ್, ಷೇರು ಬಂಡವಾಳ 3 ಕೋಟಿ ರೂಪಾಯಿ, ಕಾಯ್ದಿಟ್ಟ ನಿಧಿ 13.97 ಕೋಟಿ ರೂಪಾಯಿ ಹಾಗೂ 13.97 ಕೋಟಿ ರೂ. ನಷ್ಟು ಠೇವಣಿಗಳು ಹಾಗೂ ಕೊಟ್ಟಿರುವ ಸಾಲಗಳು 57.03 ಕೋಟಿ ರೂಪಾಯಿ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಎಂ. ಶಿವಾನಂದಪ್ಪ, ಉಪಾಧ್ಯಕ್ಷ ಆರ್.ಕೆ. ಮಂಜುನಾಥ್, ನಿರ್ದೇಶಕರಾದ ಜಿ.ಎಸ್. ಚನ್ನಬಸಪ್ಪ, ಸೈಯದ್ ಇಫ್ತಿಖಾರ್ ಅಹ್ಮದ್, ಬಿ. ಮಂಜಪ್ಪ, ಪಿ. ಶಿವಣ್ಣ, ಎಂ. ಹನುಮಂತಪ್ಪ, ಪ್ರಕಾಶ್ ದಿವಟೆ, ಕೆ.ಬಿ. ಮಂಜುನಾಥ್, ಸಂಜಯ್, ಮಂಜುನಾಥ್, ಎಲ್.ಪಿ. ಮಮತಾ, ಎ.ಬಿ. ಗಂಗಮ್ಮ, ಸಂಘದ ಕಾರ್ಯದರ್ಶಿ ಬಿ.ಜಿ. ಶರತ್ ಇತರರು ಉಪಸ್ಥಿತರಿದ್ದರು.