ಕಲಾಕುಂಚದಿಂದ ನಾಳೆ ರಾಜ್ಯಮಟ್ಟದ ಯುಗಾದಿ ಕವಿಗೋಷ್ಠಿ

ದಾವಣಗೆರೆ, ಏ. 9- ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಯುಗಾದಿ ಕವಿಗೋಷ್ಠಿಯನ್ನು ದಾವಣಗೆರೆಯ ಡಯಟ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. 

 ನಾಳೆ ಬೆಳಿಗ್ಗೆ 10-35ಕ್ಕೆ ದಾವಣಗೆರೆಯ ಹೈಸ್ಕೂಲ್ ಮೈದಾನದ ಆವರಣದಲ್ಲಿರುವ ಡಯಟ್ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿರುವ ಈ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕನ್ನಡ ಶಿಕ್ಷಕಿ, ಸಾಹಿತಿ ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿಯವರು ವಹಿಸಿಕೊಳ್ಳಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷ ನಾಟಕ ಭಾರ್ಗವ ಕೆಂಪರಾಜು ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲೆಯ ಪಾಂಡೋಮಟ್ಟಿಯ ಲೇಖಕಿ, ಕವಯತ್ರಿ ಶ್ರೀಮತಿ ಸರೋಜಾ ನಾಗರಾಜ್, ಗದಗ ಜಿಲ್ಲೆಯ ಸೊರಟೂರಿನ ಹಿರಿಯ ಕವಿ, ಲೇಖಕರೂ ಆದ ಶಿವಾನಂದ ಹನುಮಂತಪ್ಪ ಮಾಯಪ್ಪನವರ, ದಾವಣಗೆರೆ ಜಿಲ್ಲೆಯ, ಹೊನ್ನಾಳಿಯ ಹಿರಿಯ ಕವಿ, ಪಿ.ಎಂ.ಸಿದ್ದಯ್ಯ, ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿಯ ಯುವ ಕವಯತ್ರಿ, ಉಪನ್ಯಾಸಕಿ ಶ್ರೀಮತಿ ರೆಹಮತ್ ಉನ್ನೀಸಾ, ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಕವಯತ್ರಿ, ಉಪನ್ಯಾಸಕಿ, ಶ್ರೀಮತಿ ಶೈಲಾ ವಿನೋದ ದೇವರಾಜ್ ಆಗಮಿಸಲಿದ್ದಾರೆ. ಸಮಾರಂಭದ ಉದ್ಘಾಟನೆಗೂ ಮೊದಲು ಬೆಳಿಗ್ಗೆ 9-30 ರಿಂದ 10-30 ರವರೆಗೆ ಹಿರಿಯ ಗಾಯಕಿ ಶ್ರೀಮತಿ ಮಂಗಳಗೌರಿ ಮತ್ತು ಸಂಗಡಿಗರಿಂದ ಸಮೂಹಗೀತೆ ನಡೆಯಲಿದೆ ಎಂದು `ಕಾವ್ಯ ಕುಂಚ-3′ ಕವನ ಸಂಕಲನದ ಪ್ರಧಾನ ಸಂಪಾದಕ ಪಿ.ಕೆ.ನರಸಿಂಹಮೂರ್ತಿ ತಿಳಿಸಿದ್ದಾರೆ. 

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಹೆಚ್.ಮಂಜುನಾಥ್ ಹಾಗೂ ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ವೇದಿಕೆಯಲ್ಲಿ ಗೌರವ ಉಪಸ್ಥಿತಿಯಲ್ಲಿ ಇರುತ್ತಾರೆ. ದಾವಣಗೆರೆ ಜಿಲ್ಲೆಯೂ ಸೇರಿದಂತೆ, ನಾಡಿನ ವಿಜಯನಗರ, ವಿಜಯಪುರ, ಬಳ್ಳಾರಿ, ಉತ್ತರ ಕನ್ನಡ, ತುಮಕೂರು, ಬೆಂಗಳೂರು, ಶಿವಮೊಗ್ಗ ಹಾವೇರಿ ಜಿಲ್ಲೆಗಳಿಂದ ನಿರೀಕ್ಷೆಗೂ ಮೀರಿ ಹಿರಿಯ, ಕಿರಿಯ ಕವಿ, ಕವಯತ್ರಿಯರು ತಮ್ಮ ಸ್ವರಚಿತ ಕವನ ವಾಚನಕ್ಕೆ ಆಗಮಿಸಲಿದ್ದಾರೆ.

ಮಾಸ್ಕ್‍ಧಾರಣೆ, ಸಾಮಾಜಿಕ ಅಂತರದಲ್ಲಿ ಸರಳವಾಗಿ ನಡೆಯುವ ಈ ಅಪ್ಪಟ ಸಾಹಿತ್ಯಿಕ ಸಮಾರಂಭಕ್ಕೆ ಸಾಹಿತ್ಯಾಸಕ್ತರು ಆಗಮಿಸಿ ಕಾರ್ಯ ಕ್ರಮ ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜಿ.ಬಿ.ಲೋಕೇಶ್ ವಿನಂತಿಸಿದ್ದಾರೆ.

error: Content is protected !!