ವಾಣಿಜ್ಯ ಉದ್ದಿಮೆಗಳ ತ್ಯಾಜ್ಯ ಸಂಗ್ರಹ, ವಿಲೇವಾರಿ ಜವಾಬ್ದಾರಿ ಸ್ವಯಂ ಸೇವಾ ಸಂಸ್ಥೆಗಳಿಗೆ

ದಾವಣಗೆರೆ. ಆ.10- ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ವಾಣಿಜ್ಯ ಉದ್ದಿಮೆಗಳಿಂದ ಉತ್ಪತ್ತಿಯಾಗುವ ತ್ಯಾಜ್ಯವನ್ನು ಸಮರ್ಪಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುವ ಕಾರ್ಯವನ್ನು ಆಯ್ದ ಸ್ವಯಂ ಸೇವಾ ಸಂಸ್ಥೆಗಳಿಗೆ ವಹಿಸಲಾಗಿದೆ ಎಂದು ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ತಿಳಿಸಿದ್ದಾರೆ.

ನಗರದ ಎಲ್ಲಾ ವಾರ್ಡ್‌ಗಳಲ್ಲಿನ ಪ್ರಾಣಿಜನ್ಯ ತ್ಯಾಜ್ಯ ಉತ್ಪಾದಕರುಗಳಿಂದ ಉತ್ಪತ್ತಿಯಾದ (ಕೋಳಿ, ಕುರಿ, ಮೀನು) ಮಾಂಸದ ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿ ಮಾಡುವ ಕಾರ್ಯವನ್ನು ಕರ್ನಾಟಕ ನಿರ್ಮಲ ಕ್ಷೇಮಾಭಿವೃದ್ಧಿ ಸಂಘಕ್ಕೆ ವಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಣಿಜ್ಯ ತ್ಯಾಜ್ಯ ಉತ್ಪಾದಕರು ಹಾಗೂ ಪ್ರಾಣಿಜನ್ಯ ತ್ಯಾಜ್ಯ ಉತ್ಪಾದಕರು ತಮ್ಮಲ್ಲಿ ಉತ್ಪತ್ತಿಯಾದ ತ್ಯಾಜ್ಯವನ್ನು ರಸ್ತೆ, ಖಾಲಿ ನಿವೇಶನಗಳಲ್ಲಿ ಎಸೆಯದೇ, ಹಸಿ ಮತ್ತು ಒಣ ತ್ಯಾಜ್ಯಗಳಾಗಿ ಪ್ರತ್ಯೇಕವಾಗಿ ವಿಂಗಡಿಸಿ ಸಂಗ್ರಹಿಸಿ ಪಾಲಿಕೆಯ ಅಧಿಕೃತ ತ್ಯಾಜ್ಯ ಸಂಗ್ರಹಕರುಗಳಿಗೆ ನೀಡುವಂತೆ ಆಯುಕ್ತರು ಕೋರಿದ್ದಾರೆ.

ನಿಗದಿತ ಸೇವಾ ಶುಲ್ಕ ಪಾವತಿಸುವಂತೆ ಹಾಗೂ ನಗರ ಸ್ವಚ್ಛತೆಯಲ್ಲಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ತ್ಯಾಜ್ಯ ಉತ್ಪಾದಕರುಗಳು ಪಾಲಿಕೆಯ ಅಧಿಕೃತ ತ್ಯಾಜ್ಯ ಸಂಗ್ರಹಕಾರರಿಗೆ ತ್ಯಾಜ್ಯ ಹಸ್ತಾಂತರಿಸದೇ ರಸ್ತೆ, ಖಾಲಿ ನಿವೇಶನಗಳಲ್ಲಿ ಎಸೆಯುವುದು ಕಂಡುಬಂದರೆೆ ದಂಡ ವಿಧಿಸುವುದಾಗಿ ಎಚ್ಚರಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯ 1, 5, 6, 7, 8, 10, 18, 45ನೇ ವಾರ್ಡ್‌ಗಳ ವಾಣಿಜ್ಯ ಉದ್ದಿಮೆಗಳ ತ್ಯಾಜ್ಯ ಸಂಗ್ರಹ, ವಿಲೇವಾರಿ ಜವಾಬ್ದಾರಿಯನ್ನು ಶ್ರೀ ಹುಚ್ಚೆಂಗೆಮ್ಮ ದೇವಿ ಎಸ್ಸಿ, ಎಸ್ಟಿ ಕ್ರೆಡಿಟ್‌ ಕೋ-ಆಪ್‌ ಸೊಸೈಟಿಗೆ ವಹಿಸಲಾಗಿದೆ.

2, 3, 4, 9, 11, 12, 13, 14, 19, 20, 21ನೇ ವಾರ್ಡುಗಳ ತ್ಯಾಜ್ಯ ವಿಲೇವಾರಿ ಜವಾಬ್ದಾ ರಿಯನ್ನು ತನ್ವಿತ್‌ ಸೇವಾ ಸಂಸ್ಥೆಗೆ ನೀಡಲಾಗಿದೆ.

15, 16, 17, 22, 23, 24, 44ನೇ ವಾರ್ಡಿಗಳ ತ್ಯಾಜ್ಯ ವಿಲೇವಾರಿ ಮಾಡಲು ಟಿ.ಐ.ಆರ್‌.ಇ.ಇ.ಎಸ್‌. ಸಂಸ್ಥೆಗೆ ವಹಿಸಲಾಗಿದೆ.

25, 26, 27, 28, 29, 30, 35, 37ನೇ ವಾರ್ಡ್‌ಗಳ ಜವಾಬ್ದಾರಿಯನ್ನು ಕರ್ನಾಟಕ ದಲಿತ ಸೇನಾ ಸಮಿತಿಗೆ ವಹಿಸಲಾಗಿದೆ. 

31, 32, 33, 34, 36, 38, 39, 40, 41, 42 ಹಾಗೂ 43ನೇ ವಾರ್ಡ್‌ಗಳ ವಾಣಿಜ್ಯ ಉತ್ಪತ್ತಿ ತ್ಯಾಜ್ಯ ಸಂಗ್ರಹ ವಿಲೇವಾರಿ ಜವಾಬ್ದಾರಿ ಯನ್ನು ಶ್ರೀ ಮಾತಂಗ ಎಂಟರ್‌ಪ್ರೈಸಸ್‌ಗೆ ನೀಡ ಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

error: Content is protected !!