ದಾವಣಗೆರೆ, ಫೆ.7- ಬರುವ ಬಜೆಟ್ ಅಧಿವೇಶನ ದಲ್ಲಿ ಕಾರ್ಮಿಕ ಇಲಾಖೆಗೆ 15 ಸಾವಿರ ಕೋಟಿಗೂ ಹೆಚ್ಚು ಅನುದಾನ ಮೀಸಲಿಡಬೇಕು ಎಂದು ಕಾರ್ಮಿಕ ಹಕ್ಕುಗಳ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಪಾವಗಡ ಶ್ರೀರಾಮ್ ಅವರು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಏಜೆಂಟ್ ಪದ್ದತಿ ತೆಗೆದು ಹಾಕ ಬೇಕು. ಅವರನ್ನು ನೇರ ನೇಮ ಕಾತಿ ಮಾಡಬೇಕು. ಪೌರ ಕಾರ್ಮಿಕರನ್ನು ಖಾಯಂಗೊಳಿ ಸಬೇಕು. ತಮಟೆ ಕಲಾವಿದರಿಗೆ ಆಂಧ್ರ ಮತ್ತು ತೆಲಂಗಾಣ ಮಾದರಿಯಲ್ಲಿ ಮೂರು ಸಾವಿರ ಮಾಸಾಶನ ನೀಡಬೇಕು. ಕಳೆದ 50 ವರ್ಷಗಳಿಂದ ಕೆಲಸ ಮಾಡುತ್ತಿರುವ ಗ್ರಾಮ ಸಹಾ ಯಕರಿಗೆ 20 ಸಾವಿರ ವೇತನ ನೀಡಬೇಕು. ರೈತರಿಗೆ ಮತ್ತು ಸರ್ಕಾರಕ್ಕೆ ಕೊಂಡಿಯಾಗಿ ಕೆಲಸ ಮಾಡುತ್ತಿರುವ ರೈತ ಅನುವುಗಾರರನ್ನು ಮರು ನೇಮಕಾತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಗುರು ಶಾಮಯ್ಯ, ಬಿ.ಜಿ. ಸಾಗರ್, ಹನುಮಂತಪ್ಪ ಬಹದ್ದೂರ್, ಮರಿಯಣ್ಣ, ಶಿವಮೂರ್ತಿ, ಶರಣಪ್ಪ ಇದ್ದರು.