ದಾವಣಗೆರೆ, ಫೆ.5- ಹೆಲ್ಪ್‌ಲೈನ್ ಸುಭಾನ್ ಅವರಿಗೆ ಗಣರಾಜ್ಯೋತ್ಸವ ದಿನ ದಂದು ವ್ಯಕ್ತಿಯೋರ್ವರಿಂದ ತಮಗೆ ಬಂದ ಕರೆಯಲ್ಲಿ ಹೀನಾಯ ಸ್ಥಿತಿಯಲ್ಲಿರುವ ವೃದ್ಧ ದಂಪತಿ ಬಗ್ಗೆ ಮಾಹಿತಿ ಪಡೆದರು. ತಕ್ಷಣ ಕಾರ್ಯಪ್ರವೃತ್ತರಾದ ಸುಭಾನ್, ಸ್ಥಳಕ್ಕೆ ತೆರಳಿ ವೃದ್ಧ ದಂಪತಿ ಪರಿಸ್ಥಿತಿಯನ್ನು ಅವಲೋ ಕಿಸಿದರು. ತೀರಾ ಹೀನಾಯ ಸ್ಥಿತಿಯಲ್ಲಿದ್ದು, ಕಸದ ಮಧ್ಯೆ ವಾಸವಾಗಿದ್ದ, ಉಡಲು ಬಟ್ಟೆ ಇಲ್ಲದ ಸ್ಥಿತಿಯಲ್ಲಿದ್ದರು. ಕೂಡಲೇ ವೃದ್ಧರನ್ನು ಶುಚಿಗೊಳಿಸಿ ನಂತರ ಅವರಿಗೆ ಬಟ್ಟೆ, ಹೊದಿಕೆ, ಟವಲ್ ಹಾಗೂ ವೃದ್ಧೆಗೆ ಸೀರೆಗಳನ್ನು ನೀಡಿ ಮುಂದೆಯೂ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಪ್ರಥಮ ದರ್ಜೆ ಸಹಾಯಕರಾದ ಎಸ್.ಡಿ. ತ್ರಿನೇತ್ರ ಅವರು ಹೆಲ್ಪ್‌ಲೈನ್ ಸುಭಾನ್ ಅವರ ಸೇವೆಯನ್ನು ಶ್ಲಾಘಿಸಿದರು. ಸ್ಥಳಿಯರು ಮೆಚ್ಚುಗೆ ವ್ಯಕ್ತಪಡಿಸಿದರು.