ಸಾರಿಗೆ ನೌಕರರಿಗೆ 6 ನೇ ವೇತನ ಆಯೋಗ ಜಾರಿಗೊಳಿಸಲು ಆಗ್ರಹ

ಸಾರಿಗೆ ನೌಕರರಿಗೆ 6 ನೇ ವೇತನ ಆಯೋಗ ಜಾರಿಗೊಳಿಸಲು ಆಗ್ರಹ - Janathavaniದಾವಣಗೆರೆ, ಏ.7 – ರಾಜ್ಯ ರಸ್ತೆ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆಯಾದ 6 ನೇ ವೇತನ ಆಯೋಗದ ಜಾರಿಗೆ ರಾಜ್ಯ ಸರಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ.ಬಸವರಾಜ್ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. 

ಕಳೆದ ಡಿಸೆಂಬರ್‍ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದಾಗ ಸರ್ಕಾರ ಮತ್ತು ನೌಕರರ ಸಂಘದ ನಡುವೆ ನಡೆದ ಮಾತುಕತೆಯಲ್ಲಿ 6 ನೇ ವೇತನ ಆಯೋಗದ ವೇತನ ನೀಡಲು ಸರಕಾರ ಒಪ್ಪಿಕೊಂಡಿತ್ತು. ಅದರಂತೆ ಸರ್ಕಾರ ನುಡಿದಂತೆ ನಡೆದುಕೊಂಡು ರಾಜ್ಯದ ಪ್ರಯಾಣಿಕರ ಹಿತದೃಷ್ಟಿಯಿಂದ ಶೀಘ್ರ ಜಾರಿಗೊಳಿಸಲು ಅವರು ಆಗ್ರಹಿಸಿದರು. 

ಲಕ್ಷಾಂತರ ಸಾರಿಗೆ ನೌಕರರು ದಿನ ನಿತ್ಯ ಕೋಟ್ಯಾಂತರ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರ ಸ್ಥಳಕ್ಕೆ ತಲುಪಿಸಿ ಉತ್ತಮ ಸೇವೆ ಮಾಡುತ್ತಿದ್ದಾರೆ. ಇಂತಹ ನೌಕರರಿಗೆ ಅವರ ಕನಿಷ್ಠ ಜೀವನ ನಿರ್ವಹಿಸಲು ಅವರ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು. ಅದು ಬಿಟ್ಟು ಕಾರ್ಮಿಕರ ಮೇಲೆ ಎಸ್ಮಾ ಜಾರಿಗೊಳಿಸುವ ಬೆದರಿಕೆ ಹಾಕುತ್ತಿರುವುದು ಹಾಸ್ಯಾಸ್ಪದವಾಗಿದೆ. ಸರ್ಕಾರ ಕೂಡಲೇ ನೌಕರರ ಬೇಡಿಕೆ ಈಡೇರಿಸುವ ಮೂಲಕ ಈಗ ಉಂಟಾಗಿರುವ ಸಾರ್ವಜನಿಕ ತೊಂದರೆಯನ್ನು ನಿವಾರಿಸಬೇಕು. ಚುನಾವಣೆ ನೀತಿ ಸಂಹಿತೆ ಎನ್ನುವ ಕುಂಟು ನೆಪಗಳನ್ನು ಹೇಳದೆ ನೊಂದಿರುವ ಸಾರಿಗೆ ನೌಕರರ ಹಿತ ಕಾಪಾಡಬೇಕು. ಆ ಮೂಲಕ ಪ್ರಯಾಣಿಕರ ಹಿತದೃಷ್ಟಿಯಿಂದ ಈಗ ಉದ್ಘವಿಸಿರುವ ಸಮಸ್ಯೆ ನಿವಾರಿಸಿ ಎಂದು ಒತ್ತಾಯಿಸಿದರು. 

error: Content is protected !!