ದಾವಣಗೆರೆ, ಜು.1- ಸುಮಾರು 14 ವರ್ಷಗಳ ತಮ್ಮ ಹೋರಾಟದ ಪ್ರಯತ್ನಕ್ಕೆ ಇಂದು ಪ್ರತಿಫಲ ದೊರೆತಿದೆ ಎಂದು ಹರ್ಷ ವ್ಯಕ್ತಪಡಿಸಿರುವ ನಗರದ ಸಾಮಾಜಿಕ ಸೇವಾ ಕಾರ್ಯಕರ್ತ ಹೆಲ್ಪ್‌ಲೈನ್ ಸುಭಾನ್, ದಾವಣಗೆರೆ ಜಿಲ್ಲೆಗೆ ಅದರಲ್ಲೂ ದಾವಣಗೆರೆ ನಗರಕ್ಕೆ ವೈದ್ಯಕೀಯ ಕಾಲೇಜು ಮಂಜೂರು ಆಗಿರುವುದರಿಂದ ನನ್ನ ಕನಸು ನನಸಾಯಿತು ಎಂದಿದ್ದಾರೆ.
ದಾವಣಗೆರೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ತರಲು ಹೋರಾಟ ಮಾಡುವ ಸಂದರ್ಭದಲ್ಲಿ ಅನೇಕರು ನನ್ನ ಹೋರಾಟದ ಬಗ್ಗೆ ಅಪಹಾಸ್ಯ ಮಾಡಿದರು. ಆದರೆ ಅವರ ಅಪಹಾಸ್ಯವನ್ನೇ ದಾರಿ ಮಾಡಿಕೊಂಡು ಸಾಗಿದ ತನಗೆ ಇಂದು ತೃಪ್ತಿ ಸಿಕ್ಕಿದೆ ಎಂದು ಹೋರಾಟದ ಸಂದರ್ಭದಲ್ಲಿನ ಕೆಲವು ಅನುಭವಗಳನ್ನು ಹಂಚಿಕೊಂಡಿರುವ ಸುಭಾನ್, ಅವಮಾನಕ್ಕೆ ಹೆದರದೆ `ಫೀನಿಕ್ಸ್ ಪಕ್ಷಿ’ ತರಹ ಪುಟಿದೆದ್ದು ವೈದ್ಯಕೀಯ ಕಾಲೇಜು ತರಲು ಪ್ರಯತ್ನಿಸಿದೆ ಎಂದರು.