ದಾವಣಗೆರೆ, ಜು.1- ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗ ಳನ್ನು ಬಂಧಿಸಿರುವ ಪೊಲೀಸರು, ನಾಲ್ಕು ಸರಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ.
ಇಂಡಸ್ಟ್ರೀಯಲ್ ಏರಿಯಾ ಶ್ರೀರಾಮನಗರ 4 ನೇ ಕ್ರಾಸ್ ನ ತರಗಾರ ಪರಮೇಶಿ, ಲೋಕಿಕೆರೆ ರಸ್ತೆ ಆರಾಧ್ಯ ಮಿಲ್ಸ್ ಕ್ವಾಟ್ರಸ್ ನ ಹಮಾಲಿ ಕೆಲಸಗಾರ ಪ್ರದೀಪ್, ಹರಿಹರ ತಾಲ್ಲೂಕಿನ ಹಾಲಿವಾಣದ ಎ.ಕೆ. ಕಾಲೋನಿಯ ಚಾಲಕ ಎ.ಕೆ. ಹನುಮಂತ ಬಂಧಿತರು.
ಕಳೆದ ವಾರ ಡಿಸಿಎಂ ಟೌನ್ ಶಿಪ್ ಆರ್.ಹೆಚ್. ಸರ್ಕಲ್ ಹತ್ತಿರದ ತಮ್ಮ ನಂದಿನಿ ಹಾಲಿನ ಅಂಗಡಿಯ ಮುಂಭಾಗ ಹಾಲಿನ ಟ್ರೇನಲ್ಲಿರುವ ಹಾಲನ್ನು ಹಿಂದಕ್ಕೆ ಇಡುತ್ತಿರುವಾಗ ಬಂಧಿತ ಸರಗಳ್ಳ ನೋರ್ವ ಕೊರಳಿಗೆ ಕೈ ಹಾಕಿ 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ.
ಈ ಪ್ರಕರಣವಲ್ಲದೇ ಕೆಟಿಜೆ ನಗರ ಠಾಣೆ, ವಿದ್ಯಾನಗರ ಠಾಣೆ, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗಳ ತಲಾ ಒಂದು ಸರಗಳ್ಳತನ ಪ್ರಕರಣಗಳ ಪತ್ತೆ ಮಾಡಿದ್ದು, ಸರಗಳ್ಳತನವಾದ ಸರಗಳು ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳುವುದು ಬಾಕಿ ಇದ್ದು, ತನಿಖೆ ಮುಂದುವರೆಸಿದ್ದಾರೆ.
ನಗರ ಉಪವಿಭಾಗದ ಪೊಲೀಸ್ ಉಪಾಧೀ ಕ್ಷಕ ನಾಗೇಶ್ ಐತಾಳ್, ತನಿಖಾಧಿಕಾರಿ ಕೆಟಿಜೆ ನಗರ ವೃತ್ತದ ಸಿಪಿಐ ಹೆಚ್. ಗುರುಬಸವರಾಜ್, ವಿದ್ಯಾನಗರ ಠಾಣೆ ಪಿಎಸ್ ಐ ರೂಪ ತೆಂಬದ, ಕೆಟಿಜೆ ನಗರ ಠಾಣೆ ಪಿಎಸ್ ಐ ಅಬ್ದುಲ್ ಖಾದರ್ ಜಿಲಾನಿ ಮತ್ತು ಸಿಬ್ಬಂದಿಗಳಾದ ಪ್ರಕಾಶ್, ಜಾಧವ್, ಮಂಜುನಾಥ, ಮಂಜು, ತಿಮ್ಮಣ್ಣ, ಗಿರೀಶಗೌಡ, ಷಣ್ಮುಖ, ದಾದಾ ಖಲಂದರ್, ಗಣೇಶ, ರಾಘವೇಂದ್ರ, ಉಮೇಶ ಬಿಸನಾಳ್, ಶಾಂತಕುಮಾರ್ ಅವರುಗಳು ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.