ಜಿ.ಪಂ.ಎಲ್ಲಾ ಕ್ಷೇತ್ರಗಳಿಗೆ ಮೀಸಲಾತಿ ನಿಗದಿ

ಬೆಂಗಳೂರು, ಜು.1- ದಾವಣಗೆರೆ ಜಿಲ್ಲಾ ಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ಈ ಪಂಚಾಯ್ತಿಯ ಎಲ್ಲಾ 34 ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗದಿಂದ ಕರಡು ಅಧಿಸೂಚನೆ ಯನ್ನು ಇಂದು ಹೊರಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ. ರಂಜಿತಾ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಧಿಸೂಚನೆ ಯನ್ನು ರಾಜ್ಯಪತ್ರದಲ್ಲಿ ಇಂದು ಪ್ರಕಟಿಸಲಾಗಿದ್ದು, ನಿಗದಿಪಡಿಸಿರುವ ಮೀಸಲಾತಿಗೆ ಆಕ್ಷೇಪಣೆಗಳನ್ನು ಸಲ್ಲಿ ಸಲು ಇದೇ ದಿನಾಂಕ 8ರವರೆಗೆ ಕಾಲಾವಕಾಶ ನೀಡಲಾ ಗಿದೆ ಎಂದು ಅವರು ಅಧಿಸೂಚನೆಯಲ್ಲಿ ವಿವರಿಸಿದ್ದಾರೆ.  

ದೊಡ್ಡಬಾತಿ : ಅನುಸೂಚಿತ ಜಾತಿ, ಬೇತೂರು (ಅಣಜಿ) : ಅನುಸೂಚಿತ ಪಂಗಡ (ಮಹಿಳೆ), ಆನಗೋಡು : ಸಾಮಾನ್ಯ (ಮಹಿಳೆ), ಬೆಳವನೂರು : ಅನುಸೂಚಿತ ಜಾತಿ (ಮಹಿಳೆ), ಹದಡಿ : ಸಾಮಾನ್ಯ (ಮಹಿಳೆ)

ಲೋಕಿಕೆರೆ : ಸಾಮಾನ್ಯ (ಮಹಿಳೆ), ಮಾಯಕೊಂಡ : ಸಾಮಾನ್ಯ, ಕಂದಗಲ್ಲು (ಬಾಡ) : ಹಿಂದುಳಿದ ವರ್ಗ `ಅ’, ಕೊಂಡಜ್ಜಿ : ಅನುಸೂಚಿತ ಪಂಗಡ, ಬೆಳ್ಳೂಡಿ : ಸಾಮಾನ್ಯ

ಭಾನುವಳ್ಳಿ : ಅನುಸೂಚಿತ ಜಾತಿ, ಸಿರಿಗೆರೆ : ಸಾಮಾನ್ಯ, ಕುಂಬಳೂರು : ಸಾಮಾನ್ಯ, ಅಸಗೋಡು : ಅನುಸೂಚಿತ ಪಂಗಡ (ಮಹಿಳೆ), ಬಿಳಿಚೋಡು : ಅನುಸೂಚಿತ ಜಾತಿ (ಮಹಿಳೆ) 

ಸೊಕ್ಕೆ : ಸಾಮಾನ್ಯ (ಮಹಿಳೆ), ಅಣಬೂರು : ಹಿಂದುಳಿದ ವರ್ಗ `ಅ’ (ಮಹಿಳೆ), ಬಿದರಕೆರೆ (ದೊಣ್ಣೆಹಳ್ಳಿ) : ಸಾಮಾನ್ಯ, ಹೊಸಕೆರೆ (ಬಸವಾಪಟ್ಟಣ) : ಹಿಂದುಳಿದ ವರ್ಗ `ಅ’ (ಮಹಿಳೆ), ಕೆರೆಬಿಳಚಿ (ತ್ಯಾವಣಿಗಿ) : ಹಿಂದುಳಿದ ವರ್ಗ `ಬ’

ಕರೇಕಟ್ಟೆ (ಕೋಗಲೂರು) : ಅನುಸೂಚಿತ ಪಂಗಡ, ಸಂತೇಬೆನ್ನೂರು : ಅನುಸೂಚಿತ ಜಾತಿ (ಮಹಿಳೆ), ನಲ್ಲೂರು : ಸಾಮಾನ್ಯ (ಮಹಿಳೆ), ಅಗರಬನ್ನಿಹಟ್ಟಿ : ಅನುಸೂಚಿತ ಜಾತಿ (ಮಹಿಳೆ), ದೇವರಹಳ್ಳಿ (ಹೊದಿಗೆರೆ) : ಸಾಮಾನ್ಯ

ಪಾಂಡೋಮಟ್ಟಿ (ಹೊನ್ನೇಬಾಗಿ) : ಸಾಮಾನ್ಯ, ತಾವರೆಕೆರೆ : ಸಾಮಾನ್ಯ (ಮಹಿಳೆ), ಬೇಲಿಮಲ್ಲೂರು : ಅನುಸೂಚಿತ ಪಂಗಡ (ಮಹಿಳೆ), ಕುಂದೂರು : ಸಾಮಾನ್ಯ, ಸಾಸ್ವೇಹಳ್ಳಿ : ಅನುಸೂಚಿತ ಜಾತಿ

ಸೊರಟೂರು : ಸಾಮಾನ್ಯ (ಮಹಿಳೆ), ಬೆಳಗುತ್ತಿ : ಅನುಸೂಚಿತ ಜಾತಿ, ಚೀಲೂರು : ಸಾಮಾನ್ಯ (ಮಹಿಳೆ), ಜೋಗ : ಸಾಮಾನ್ಯ.

error: Content is protected !!