ಹರಿಹರ, ಜೂ.30- ದಾವಣಗೆರೆ ನಗರದಲ್ಲಿ 3 ವೈದ್ಯಕೀಯ ಕಾಲೇಜು ಗಳಿದ್ದು, ಸರ್ಕಾರಿ ವೈದ್ಯಕೀಯ ಕಾಲೇ ಜನ್ನು ಹರಿಹರದಲ್ಲಿ ಮಾಡುವಂತೆ ಶ್ರೀ ವಿಶ್ವಬಂಧು ಕ್ರೆಡಿಟ್ ಕೋ-ಆಪ್ ಸೊಸೈಟಿ ಅಧ್ಯಕ್ಷ ಬಿ. ರಾಮಚಂದ್ರಪ್ಪ ಬೆಳ್ಳೂಡಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಹರಿಹರ 2ನೇ ದೊಡ್ಡ ನಗರವಾಗಿದ್ದು, ಭೌಗೋಳಿಕವಾಗಿ ಮಧ್ಯ ಕರ್ನಾಟಕದಲ್ಲಿದೆ. ರಾಷ್ಟ್ರಮಟ್ಟದಲ್ಲಿ ಈ ನಗರ ತನ್ನದೇ ಆದ ಇತಿಹಾಸ ಹೊಂದಿದೆ. ಆದರೆ, ವೈದ್ಯಕೀಯ ವ್ಯವಸ್ಥೆ, ನಗರ ಸಂಚಾರ, ಶಾಲಾ-ಕಾಲೇಜುಗಳು ಸೇರಿದಂತೆ, ಯಾವುದೇ ನಾಗರಿಕ ಸೌಲಭ್ಯಗಳಲ್ಲಿ ಹಿಂದುಳಿದಿದೆ. ಹರಿಹರದ ಸರ್ಕಾರಿ ಆಸ್ಪತ್ರೆಯಲ್ಲಿ ಕಾಲೇಜಿಗೆ ಅಗತ್ಯವಿರುವ ಸ್ಥಳವಿದೆ. ಜಿಲ್ಲಾ ಮಂತ್ರಿಗಳು ಮತ್ತು ಸಂಸದರು ಇದಕ್ಕೆ ಸ್ಪಂದಿಸಿ, ಹರಿಹರದಲ್ಲಿಯೇ ವೈದ್ಯಕೀಯ ಕಾಲೇಜು ಆರಂಭಿಸುವಂತೆ ಅವರು ಕೇಳಿಕೊಂಡಿದ್ದಾರೆ.