ಎಂ.ಪಿ.ಲತಾ ಮಲ್ಲಿಕಾರ್ಜುನ್ ಬಣ ಮೇಲುಗೈ
ಹರಪನಹಳ್ಳಿ, ಫೆ.1 – ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಯುವ ಕಾಂಗ್ರೆಸ್ ಚುನಾವಣೆ ಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿ ಕಾರ್ಜುನ್ ಅವರ ಬಣ ಮೇಲುಗೈ ಸಾಧಿಸಿದ್ದು, 460 ಮತಗಳನ್ನು ಪಡೆದು ಕೊಂಡ ಯುವ ನಾಯಕ ಮತ್ತೂರು ಬಸವರಾಜ್ ಅವರು ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜನವರಿ 31ರಂದು ಫಲಿತಾಂಶ ಪ್ರಕಟ ಗೊಂಡಿದೆ. ಮತ್ತೂರು ಬಸವರಾಜ್-460 ಮತ ಪಡೆದು ತಾಲ್ಲೂಕು ಅಧ್ಯಕ್ಷರಾಗಿ, ಮಕರಬ್ಬಿ ದಾದ ಪೀರ್-403 ಮತಗಳನ್ನು ಪಡೆದು ಉಪಾಧ್ಯ ಕ್ಷರಾಗಿ, ಪ್ರವೀಣಕುಮಾರ್-197 ಮತ ಪಡೆದು ಎಸ್ಸಿ-ಎಸ್ಟಿ ಮೀಸಲಾತಿಯಲ್ಲಿ ಉಪಾಧ್ಯಕ್ಷ ಸ್ಥಾನ, ಸಾಧಿಕ್-297 ಮತ, ಕೆ.ಮಂಜುನಾಥ-199, ತರುಣ್‍ಕುಮಾರ್-48 ಮತ, ಕರಿಬಸಪ್ಪ-19 ಮತ, ತಿಮ್ಮಲಾಪುರದ ಡಿ.ದೇವರಾಜ್-10 ಮತ, ಸಿ.ಮಂಜುನಾಥ-7 ಮತ ಪಡೆದುಕೊಂಡು 6 ಜನರು ಪ್ರಧಾನ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ. ಎಂ.ಪಿ. ವೀಣಾ ಬಣದಿಂದ ಹೆಚ್.ಶಿವರಾಜ್-135 ಮತ ಪಡೆದು ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಸಾಸ್ವಿಹಳ್ಳಿ ನಾಗರಾಜ್-39 ಮತ ಪಡೆದು ಉಪಾಧ್ಯಕ್ಷರಾಗಿ, ಓ.ಪ್ರವೀಣ್-7 ಮತ ಪಡೆದು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಹರಪನಹಳ್ಳಿ-ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಹಿಂದೆ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಬಣ ರಾಜಕಾರಣ ಎದ್ದು ಕಾಣುತ್ತಿತ್ತು. ತಮ್ಮ ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದರು.