ಸಹಜ ಆಸೆಗಳನ್ನು ಬದಿಗಿಟ್ಟು ನಮ್ಮ ಕಾಯಕವನ್ನು ಸಾಧಿಸಲು ಪ್ರಯತ್ನಿಸಬೇಕು : ಪ್ರೊ.ಎಸ್.ವಿ. ಹಲಸೆ

ಸಹಜ ಆಸೆಗಳನ್ನು ಬದಿಗಿಟ್ಟು ನಮ್ಮ ಕಾಯಕವನ್ನು ಸಾಧಿಸಲು ಪ್ರಯತ್ನಿಸಬೇಕು : ಪ್ರೊ.ಎಸ್.ವಿ. ಹಲಸೆ - Janathavaniದಾವಣಗೆರೆ, ಜ.31 – ಮನುಷ್ಯನಿಗೆ ಆಸೆಗಳು ಸಹಜ. ಆಸೆಗಳನ್ನು ಬದಿಗಿಟ್ಟು ನಮ್ಮ ಕಾಯಕವನ್ನು ಸಾಧಿಸಲು ಪ್ರಯತ್ನಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿ. ಹಲಸೆ ಹೇಳಿದರು.

ದಾವಣಗೆರೆ ವಿವಿ ಎಂಬಿಎ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ರಂಗ ವಿಮರ್ಶಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು. ಲಿಖಿತ ಪಠ್ಯ-ರಂಗ ಪಠ್ಯ ಮತ್ತು ವಿಮರ್ಶೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಸತತ ಪ್ರಯತ್ನ ಬಹುಮುಖ್ಯ. ವಿದ್ಯಾರ್ಥಿಗಳ ಕಾಯಕ ಅಧ್ಯಯನ ಮಾಡುವುದಾದರೆ, ಸಮರ್ಪಕವಾಗಿ ಪಾಠ ಪ್ರವಚನ ಮಾಡುವುದು ಶಿಕ್ಷಕರ ಕಾಯಕ ಮತ್ತು ಜವಾಬ್ದಾರಿ. ಯಾವುದೇ ಶಿಕ್ಷಕನಿಗೆ ನಾನು ಉತ್ತಮ ವಿದ್ಯಾರ್ಥಿಗಳನ್ನು ಹೊರ ತರುತ್ತೇನೆ ಎಂಬ ಆತ್ಮವಿಶ್ವಾಸವಿರಬೇಕು. ಆಗ ಮಾತ್ರ ನಮ್ಮ ದೇಶ ರಾಮರಾಜ್ಯವಾಗುತ್ತದೆ ಎಂದು ಹೇಳಿದರು.

ಎಲ್ಲಾ ವಿದ್ಯಾರ್ಥಿಗಳ ಬುದ್ದಿಮಟ್ಟ ಒಂದೇ ಆಗಿರುತ್ತದೆ. ಆದರೆ ಅಭ್ಯಾಸದಲ್ಲಿ ತೊಡಗಿಕೊಳ್ಳುವಿಕೆಯ ಸಮಯ ಹೆಚ್ಚಾದಂತೆ ಅವರ ಜ್ಞಾನ ಹೆಚ್ಚಾಗುತ್ತಾ ಹೋಗುತ್ತದೆ. ಜೊತೆಗೆ ನಮ್ಮ ಮತ್ತು ವಿದ್ಯಾರ್ಥಿಗಳ ಸಂಬಂಧ ಉತ್ತಮವಾಗಿದ್ದಲ್ಲಿ ಮಾತ್ರ ಒಳ್ಳೆಯ ಶಿಕ್ಷಣ ನಿಡಲು ಸಾಧ್ಯವಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳು  ಭಾಷೆಯನ್ನು ಪರಿಶುದ್ದವಾಗಿ ಕಲಿಯಬೇಕು ಎಂದು ಸಲಹೆ ನೀಡಿದರು.

error: Content is protected !!