ರಾಣೇಬೆನ್ನೂರು ತಾಲ್ಲೂಕಿನಲ್ಲಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಬಿಜೆಪಿ 24, ಕಾಂಗ್ರೆಸ್ ಪಾಲಿಗೆ 9

ರಾಣೇಬೆನ್ನೂರು, ಜ.30-  ಜ. 28 ಹಾಗೂ  29 ರಂದು ತಾಲ್ಲೂಕಿನ 33 ಗ್ರಾಮ ಪಂಚಾಯ್ತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, ಅವುಗಳಲ್ಲಿ 24 ಬಿಜೆಪಿ ಬೆಂಬಲಿತರು ಹಾಗೂ 9 ಕಾಂಗ್ರೆಸ್ ಬೆಂಬಲಿತರು ಆಡಳಿತದ  ಚುಕ್ಕಾಣಿ ಹಿಡಿದಿದ್ದಾರೆ.

ಗ್ರಾ.ಪಂ. ಚುನಾವಣೆಯಲ್ಲಿ ಬಹುಮತ ಪಡೆದಿದ್ದ ಕೆಲವು ಮೀಸಲಾತಿಯಲ್ಲಿ ಸಮಬಲವಿದ್ದವರ ಹೆಸರನ್ನು ಚೀಟಿ ಎತ್ತಿ, ಕೆಲವು ರಾಜಕೀಯ  ಕುತಂತ್ರದ ಆಪರೇಷನ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು  ಆಡಳಿತ ಹಿಡಿಯುವಲ್ಲಿ ವಂಚನೆಗೊಳಗಾದ ಬಗ್ಗೆ ತಿಳಿದು ಬಂದಿದ್ದು, ಅಂತಿಮವಾಗಿ ಬಲಾಬಲ 24 ಮತ್ತು 9 ಕ್ಕೆ ಸೀಮಿತಗೊಂಡಿದೆ.

ಕೋಳಿವಾಡರ ಹುಟ್ಟೂರು ಗುಡಗೂರು ಸೇರಿದಂತೆ    ಕರೂರು, ಮಾಕನೂರು, ಮೆಡ್ಲೇರಿ, ಇಟಗಿ, ಕಮದೋಡ, ಚಿಕ್ಕಕುರವತ್ತಿ, ವೈ.ಟಿ. ಹೊನ್ನತ್ತಿ ಮತ್ತು  ಅರೇಮಲ್ಲಾಪುರ  ಗ್ರಾ.ಪಂ. ಗಳು ಕಾಂಗ್ರೆಸ್ ಪಾಲಾಗಿವೆ. ಶಾಸಕ ಅರುಣಕುಮಾರ ಪೂಜಾರ ಅವರ ಹುಟ್ಟೂರು ಕೋಡಿಯಾಲ ಸೇರಿದಂತೆ ಎಲ್ಲವೂ ಬಿಜೆಪಿ ಪಾಲಾಗಿವೆ.

error: Content is protected !!