ಗರ್ಭಕೋಶದಲ್ಲಿ ಬೆಳೆದಿದ್ದ 18.4 ಕೆಜಿ ತೂಕದ ಗಡ್ಡೆ

ದಾವಣಗೆರೆ, ಏ.2- ಗರ್ಭಕೋಶದಲ್ಲಿ ಬೆಳೆದಿದ್ದ 18.4 ಕೆಜಿ ತೂಕದ ಗಡ್ಡೆಯನ್ನು ಯಶಸ್ವೀ ಶಸ್ತ್ರ ಚಿಕಿತ್ಸೆ ನಡೆಸಿ ಇಲ್ಲಿನ ಜಿಲ್ಲಾಸ್ಪತ್ರೆಯ ವೈದ್ಯರ ತಂಡ ಮಹಿಳೆಗೆ ಮರು ಜನ್ಮ ನೀಡಿರುವ ಘಟನೆ ನಡೆದಿದೆ. 

ಬಳ್ಳಾರಿ ಜಿಲ್ಲೆಯ ಮೂಲದ ಮಹಿಳೆಯೊಬ್ಬರು ಕಳೆದ 6 ತಿಂಗಳಿಂ ದಲೂ ಗರ್ಭಕೋಶದಲ್ಲಿ ಗಡ್ಡೆಯಾಗಿ ತೀವ್ರ ನೋವು ಅನುಭವಿಸುತ್ತಿದ್ದರು.  ಆಕೆಯ ಹೊಟ್ಟೆಯಲ್ಲಿ ಸುಮಾರು 18.4 ಕೆಜಿ ತೂಕದ ಗಡ್ಡೆ ಬೆಳೆಯುತ್ತಲೇ ಇತ್ತು. ತೀವ್ರ ತೊಂದರೆಯಾದ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಶಸ್ತ್ರ ಚಿಕಿತ್ಸೆಗೆ ಒಪ್ಪಿದ್ದರು.  ನಗರದ ಜಿಲ್ಲಾಸ್ಪತ್ರೆಯ ಸ್ತ್ರೀ ರೋಗ ತಜ್ಞ ಡಾ. ಗಿರಿಧರ್, ಶಸ್ತ್ರ ಚಿಕಿತ್ಸಕ ಡಾ. ರವೀಂದ್ರ ನೇತೃತ್ವದ ವೈದ್ಯರು ಹಾಗೂ ಶುಶ್ರೂಷಕರನ್ನು ಒಳಗೊಂಡ ತಂಡವು ಸುಮಾರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ, ಯಶಸ್ವಿಯಾಗಿ ಗಡ್ಡೆಯನ್ನು ಹೊರ ತೆಗೆದಿದ್ದಾರೆ.  

ಗಡ್ಡೆಯಿಂದ ತನಗೆ ಮುಕ್ತಿ ಕೊಡಿಸಿದ ವೈದ್ಯರು, ಸಿಬ್ಬಂದಿಗೆ ಮಹಿಳೆ ಹಾಗೂ ಆಕೆಯ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!