ರಾಷ್ಟ್ರೀಯ ಹೆದ್ದಾರಿ ವೈಫಲ್ಯದ ವಿರುದ್ಧ ಮೃತ ಮಹಿಳೆಯರ ಕುಟುಂಬದ ಸದಸ್ಯರಿಂದ ಜಾಥಾ
ದಾವಣಗೆರೆ, ಜ.28- ಧಾರವಾಡ ಬೈಪಾಸ್ ರಸ್ತೆಯಲ್ಲಿ ಈಚೆಗೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯರ ಕುಟುಂಬದ ಸದಸ್ಯರು ಹಾಗೂ ದಾವಣಗೆರೆ – ಹುಬ್ಬಳ್ಳಿ – ಧಾರವಾಡದ ನಾಗರಿಕ ಸುರಕ್ಷತಾ ವೇದಿಕೆಯು ಆಡಳಿತ ವರ್ಗದ ದಿವ್ಯ ನಿರ್ಲಕ್ಷ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ವೈಫಲ್ಯದ ವಿರುದ್ಧ ಬರುವ ಫೆಬ್ರವರಿ 6 ರ ಶನಿವಾರ ಬೆಳಿಗ್ಗೆ 7 ಗಂಟೆಗೆ ಜಾಥಾ ಮತ್ತು ಪ್ರತಿಭಟನೆ ಸಹಿತ ಮೃತರ ಆತ್ಮಕ್ಕೆ ಶಾಂತಿ ಕೋರುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಜಾಥಾವು ಅಂದು ಬೆಳಿಗ್ಗೆ 7 ಗಂಟೆಗೆ ನಗರದ ಐಎಂಎ ಹಾಲ್ ಆವರಣದಿಂದ ಹೊರಡಲಿದ್ದು, ಅಪಘಾತ ಸ್ಥಳಕ್ಕೆ ತಲುಪಿ, ಅಲ್ಲಿ ಪ್ರತಿಭಟನೆ ಸಹಿತ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಸ್ಥಳೀಯ ಆರೈಕೆ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರವಿಕುಮಾರ್ (94448 452885) ತಿಳಿಸಿದ್ದಾರೆ.
ಸರ್ಕಾರದ ವೈಫಲ್ಯಗಳನ್ನು ತೆರೆದಿಟ್ಟು, ಇಂತಹ ದುರ್ಘಟನೆಗಳು ಮರು ಸಂಭವಿಸದಂತೆ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
ವಿವರಗಳಿಗೆ ಡಾ. ರಮೇಶ್ (94483 45721), ಡಾ. ಹಾಲಸ್ವಾಮಿ ಕಂಬಾಳಿಮಠ್ (98269 15042) ಅವರುಗಳನ್ನು ಸಂಪರ್ಕಿಸಬಹುದು.