ಹರಪನಹಳ್ಳಿ, ಜ.26 – ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಪದಾಧಿಕಾರಿಗಳ ಚುನಾವಣೆ ಬರುವ ಫೆಬ್ರವರಿ 14ರಂದು ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸಿ.ಎಂ.ಕೊಟ್ರಯ್ಯ ತಿಳಿಸಿದರು.
ಪಟ್ಟಣದ ಕೆ.ಸಿ.ಎ. ಆಂಗ್ಲ ಮಾಧ್ಯಮ ಪ್ರೌಢ ಶಾಲಾವರಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾಳೆ ದಿನಾಂಕ 28ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದ್ದು ಕೊನೆಯ ದಿನ ಫೆ.2ಕ್ಕೆ ಮುಕ್ತಾಯಗೊಳ್ಳುತ್ತದೆ. ಫೆ.3ರಂದು ನಾಮಪತ್ರ ಗಳ ಪರಿಶೀಲನೆ. ಫೆ.6ರ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ಹಿಂಪಡೆಯಬಹುದು. ಫೆ.14ರಂದು ಮತದಾನ ಪ್ರಕ್ರಿಯೆ ನಡೆಯಲಿದೆ ಎಂದರು.
ತಾಲ್ಲೂಕಿನಲ್ಲಿ 351 ಜನ ಸದಸ್ಯರು ಮತ ಚಲಾಯಿಸಲು ಅರ್ಹರಿದ್ದಾರೆ. ಒಂದು ಅಧ್ಯಕ್ಷ ಸ್ಥಾನ, 7 ಮಹಿಳಾ ಮೀಸಲು ಸ್ಥಾನ, 13 ಸಾಮಾನ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೆ.ಸಿ.ಎ.ಆಂಗ್ಲ ಮಾಧ್ಯಮ ಶಾಲಾವರಣದಲ್ಲಿಯೇ ಚುನಾವಣೆ ಪ್ರಕ್ರಿಯೆ ಜರುಗಲಿದೆ.
ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಎಂ.ರಾಜಶೇಖರ್ ಮಾತನಾಡಿದರು. ಮುಖಂಡರಾದ ಪಿ.ಬೆಟ್ಟನಗೌಡ, ಎಂ.ಟಿ.ಬಸವನಗೌಡ, ಸದ್ಯೋಜಾ ತಯ್ಯ, ಟಿ.ಎಂ.ಚಂದ್ರಶೇಖರಯ್ಯ, ಟಿ.ಎಚ್.ಎಂ. ಮಲ್ಲಿ ಕಾರ್ಜುನಯ್ಯ, ಅಂಬ್ಲಿ ಮಂಜುನಾಥ, ಮತ್ತಿಹಳ್ಳಿ ಅಜ್ಜಣ್ಣ, ಪ್ರಭಾ ಅಜ್ಜಣ್ಣ, ಹಾರಕನಾಳ ಪ್ರಕಾಶಗೌಡ, ಎಸ್.ಎಂ.ವೀರಭದ್ರಯ್ಯ, ಎಚ್.ಮಲ್ಲಿಕಾರ್ಜುನ, ಮಟ್ಟಿ ಮುತ್ತಣ್ಣ, ಪದ್ಮಾವತಿ, ಚಂದ್ರಶೇಖರ ಪತ್ರಿಕಾ ಗೋಷ್ಠಿಯಲ್ಲಿದ್ದರು.