ಮಲೇಬೆನ್ನೂರು, ಏ.1- ಹನಗವಾಡಿ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವವು ಗುರುವಾರ ಸಂಜೆ ಸಂಭ್ರಮ ದಿಂದ ಜರುಗಿತು. ವಿವಿಧ ಕಲಾ-ಮೇಳಗಳು ರಥೋತ್ಸವಕ್ಕೆ ಮೆರಗು ತಂದವು.ಪ್ರತಿ ವರ್ಷ ರಾತ್ರಿ 10 ಗಂಟೆಯ ನಂತರ ನಡೆಯುತ್ತಿದ್ದ ರಥೋತ್ಸವವನ್ನು ಈ ಬಾರಿ ಸಂಜೆ ವೇಳೆಗೆ ಹರಿಸಿದ್ದು ವಿಶೇಷವಾಗಿತ್ತು.
ನಾಳೆ ಶುಕ್ರವಾರ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 12.30 ರವರೆಗೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಸ್ವಾಮಿ ಗುಗ್ಗಳ ಇರುತ್ತದೆ.