ದಾವಣಗೆರೆ, ಏ.1- ಜಿಲ್ಲೆಯಲ್ಲಿ ಗುರುವಾರ 17 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಪ್ರಸ್ತುತ ಜಿಲ್ಲೆಯಲ್ಲಿ 67 ಸಕ್ರಿಯ ಪ್ರಕರಣಗಳಿವೆ
ದಾವಣಗೆರೆ ತಾಲ್ಲೂಕಿನಲ್ಲಿ 7 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದರೆ, ಹರಿಹರ ಹಾಗೂ ಜಗಳೂರಿನಲ್ಲಿ ತಲಾ 1, ಚನ್ನಗಿರಿಯಲ್ಲಿ 2, ಹೊನ್ನಾಳಿ 3 ಹಾಗೂ ಹೊರ ಜಿಲ್ಲೆಯಿಂದ ಬಂದ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. 8 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಮಲೇಬೆನ್ನೂರು : ಐವರಿಗೆ ಕೊರೊನಾ ಸೋಂಕು
ಮಲೇಬೆನ್ನೂರು, ಏ.1 – ಗುರುವಾರ ಮಲೇಬೆನ್ನೂರು ಹೋಬಳಿಯಲ್ಲಿ 5 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಜನರಲ್ಲಿ ಮತ್ತೆ ಆತಂಕವನ್ನು ಹೆಚ್ಚಿಸಿದೆ. ಮಲೇಬೆನ್ನೂರಿನಲ್ಲಿ 14 ವರ್ಷದ ವಿದ್ಯಾರ್ಥಿಗೆ, ಭಾನುವಳ್ಳಿಯಲ್ಲಿ 60 ವರ್ಷದ ವ್ಯಕ್ತಿಗೆ, 16 ವರ್ಷದ ಬಾಲಕಿಗೆ ಮತ್ತು ಕೊಕ್ಕನೂರಿನ 14 ವರ್ಷದ ವಿದ್ಯಾರ್ಥಿಗೆ ಕೊರೊನಾ ಸೋಂಕು ತಗುಲಿದೆ ಎಂದು ಗೊತ್ತಾಗಿದೆ.
ಐವರ ಪೈಕಿ ನಾಲ್ವರು ವಿದ್ಯಾರ್ಥಿಗಳಿಗೆ ಸೋಂಕು ಕಾಣಿಸಿಕೊಂಡಿರುವುದರಿಂದ ಜನರು ಜಾಗೃತರಾಗ ಬೇಕು ಮತ್ತು ವಿದ್ಯಾರ್ಥಿಗಳು ಕೂಡಾ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಶಾಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಉಪ ತಹಶೀಲ್ದಾರ್ ಆರ್.ರವಿ ಮನವಿ ಮಾಡಿಕೊಂಡಿದ್ದಾರೆ.