ದಾವಣಗೆರೆ, ಮಾ. 31 – ನಗರದ ಶ್ರೀ ಮಲ್ಲಿಕಾರ್ಜುನ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಲ್ಲಿ ನಡೆದ ಉದ್ಯೋಗ ಮೇಳದಲ್ಲಿ 110 ಅಭ್ಯರ್ಥಿಗಳು ಹಾಜರಾಗಿದ್ದು, 56 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಉದ್ಯೋಗ ಪತ್ರ ವಿತರಿಸಲಾಯಿತು. ಉದ್ಯೋಗ ಮೇಳದಲ್ಲಿ ಶ್ರೀ ಮಲ್ಲಿಕಾರ್ಜುನ ಸಮೂಹ ಸಂಸ್ಥೆ ಅಧ್ಯಕ್ಷ ಎನ್.ಜೆ. ಗುರುಸಿದ್ದಯ್ಯ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಉಪ ಪ್ರಾಂಶುಪಾಲ ಹನುಮಂತರಾವ್ ಸಿಂಧೆ, ಪ್ಲೇಸ್ ಮೆಂಟ್ ಅಧಿಕಾರಿ ಅನೂಪ್ ಕುಮಾರ್, ವಿ.ಎಸ್.ಎಸ್. ಎಂಟರ್‍ಪ್ರೈಸಸ್ ಮ್ಯಾನೇಜಿಂಗ್ ಡೈರೆಕ್ಟರ್ ಮೊಹಮದ್ ಅಪ್ಸರ್ ಮತ್ತಿತರರಿದ್ದರು.
December 26, 2024