ಉಪಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್‌ ಮಹಿಳಾ ಅಭ್ಯರ್ಥಿಗಳ ಗೆಲುವು

ಉಪಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್‌ ಮಹಿಳಾ ಅಭ್ಯರ್ಥಿಗಳ ಗೆಲುವು - Janathavaniಕೂಡ್ಲಿಗಿ, ಮಾ.31-  ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ 1 ಮತ್ತು 12 ನೇ ವಾರ್ಡ್‌ಗಳಿಗೆ ಮಾ. 29 ರಂದು ನಡೆದ ಉಪ ಚುನಾವಣೆಯ ಮತ ಎಣಿಕೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಚುನಾವಣಾಧಿಕಾರಿ ಕೆ. ವಾಮದೇವ್ ಫಲಿತಾಂಶ ಘೋಷಿಸಿದರು.

ಒಂದನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲೀಲಾವತಿ ಪ್ರಭಾಕರ್ 237 ಮತಗಳನ್ನು ಪಡೆದು ಆಯ್ಕೆಯಾದರು. ಬಿಜೆಪಿ ಅಭ್ಯರ್ಥಿ ಎಂ.ವಿ. ಪ್ರಕಾಶ್ ನಾಯ್ಕ್ 186 ಹಾಗೂ ಜೆಡಿಎಸ್‌ನ ಬಿ. ನಾಗರಾಜ 167 ಮತಗಳನ್ನು ಪಡೆದರು. 

12ನೇ ವಾರ್ಡ್‌ನಲ್ಲಿ ಜೆಡಿಎಸ್‌ನ ಬಡಭೀ ಮಯ್ಯನವರ ಸರಸ್ವತಿ ರಾಘವೇಂದ್ರ 457 ಮತಗಳನ್ನು ಪಡೆದು ಜಯದ ನಗೆ ಬೀರಿದರು. ಪ್ರತಿಸ್ಪರ್ಧಿಗಳಾಗಿದ್ದ ಬಿಜೆಪಿಯ ಮಲ್ಲಮ್ಮ ಸೋಮಯ್ಯನವರ ನಾಗರಾಜ 251 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಮಾಲಿಗಿ ರೂಪಾ ಮಂಜುನಾಥ್ 241 ಮತಗಳು, ಪಕ್ಷೇತರ ಅಭ್ಯರ್ಥಿ ಕೆ. ವಾಣಿ ರಮೇಶ್ 39 ಮತಗಳನ್ನು ಪಡೆದಿದ್ದಾರೆ. ಎರಡೂ ವಾರ್ಡ್‌ಗಳಲ್ಲಿ ಆಡಳಿತಾ ರೂಢ ಬಿಜೆಪಿ ಅಭ್ಯರ್ಥಿಗಳು  ಪರಾಜಯ ಗೊಂಡಿರುವುದು ಆಶ್ಚರ್ಯ ಮೂಡಿಸಿದೆ.

error: Content is protected !!