ಗಾಯಕ ಎಸ್‌ಪಿಬಿ, ವೈದ್ಯ ಬಿ.ಎಂ. ಹೆಗಡೆ ಜಪಾನ್ ಮಾಜಿ ಪ್ರಧಾನಿ ಅಬೆಗೆ `ಪದ್ಮವಿಭೂಷಣ’

ಗಾಯಕ ಎಸ್‌ಪಿಬಿ, ವೈದ್ಯ ಬಿ.ಎಂ. ಹೆಗಡೆ ಜಪಾನ್ ಮಾಜಿ ಪ್ರಧಾನಿ ಅಬೆಗೆ `ಪದ್ಮವಿಭೂಷಣ' - Janathavani119 ಸಾಧಕರಿಗೆ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ

ನವದೆಹಲಿ, ಜ. 25 – ಜಪಾನಿನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ, ದಿವಂಗತ ಗಾಯಕ ಎಸ್.ಪಿ. ಬಾಲಸುಬ್ರ ಮಣ್ಯಂ ಹಾಗೂ ವೈದ್ಯ ಡಾ. ಬಿ.ಎಂ. ಹೆಗಡೆ ಸೇರಿದಂತೆ ಏಳು ಜನರು ಈ ಬಾರಿ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಕೇಂದ್ರ ಸರ್ಕಾರ ಗಣರಾಜ್ಯೋ ತ್ಸವದ ಮುನ್ನಾ ದಿನ ಪದ್ಮ ಪ್ರಶಸ್ತಿ ಗಳನ್ನು ಪ್ರಕಟಿಸಿದೆ. ಒಟ್ಟು 119 ಪದ್ಮ ಪ್ರಶಸ್ತಿಗಳನ್ನು ಗೃಹ ಸಚಿವಾಲಯ ಪ್ರಕಟಿಸಿದೆ. ಇದರಲ್ಲಿ ಏಳು ಪದ್ಮ ವಿಭೂಷಣ, 10 ಪದ್ಮಭೂಷಣ ಹಾಗೂ 102 ಪದ್ಮ ಪ್ರಶಸ್ತಿಗಳಿವೆ. ದಿವಂಗತರಾದ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಹಾಗೂ ಕೇಂದ್ರ ಸಚಿವರಾದ ಕೇಶುಭಾಯಿ ಪಟೇಲ್ ಹಾಗೂ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಪದ್ಮಭೂಷಣ ಪ್ರಶಸ್ತಿಗೆ ಪ್ರಕಟಿಸಲಾಗಿದೆ.  ಲೋಕಸಭೆಯ ಮಾಜಿ ಸ್ಪೀಕರ್ ಸುಮಿತ್ರ ಮಹಾಜನ್ ಅವರೂ ಪದ್ಮ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಬಾರಿ ಪದ್ಮ ಪ್ರಶಸ್ತಿ ಪಡೆದವರಲ್ಲಿ 29 ಮಹಿಳೆಯರಿದ್ದಾರೆ. ವಿದೇಶಿಯರು, ಅನಿವಾಸಿಯರಲ್ಲಿ ಹತ್ತು ಜನರಿದ್ದರೆ, ಒಬ್ಬರು ತೃತೀಯ ಲಿಂಗಿಯಾಗಿದ್ದಾರೆ. 16 ಜನರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗಿದೆ.

ಮರಳು ಕಲಾವಿದ ಸುದರ್ಶನ್ ಸಾಹೂ ಅವರು ಪದ್ಮವಿಭೂಷಣ ಪಡೆದುಕೊಂಡಿದ್ದಾರೆ. ಪ್ರಧಾನ ಮಂತ್ರಿ ಯವರ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ನೃಪೇಂದ್ರ ಮಿಶ್ರ, ಧಾರ್ಮಿಕ ಮುಖಂಡರಾಗಿದ್ದ ದಿ. ಕಲ್ಬೇ ಸಾಧಿಕ್ ಹಾಗೂ ಸಾಮಾಜಿಕ ಕಾರ್ಯಕರ್ತ ತಾರಾಲೋಚನ್ ಸಿಂಗ್ ಅವರು ಪದ್ಮಭೂಷಣ ಪಡೆದುಕೊಂಡಿದ್ದಾರೆ.

ಮಾಜಿ ರಾಜ್ಯಪಾಲೆ ಮೃದುಲಾ ಸಿನ್ಹಾ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ನೀಡಲಾಗಿದೆ. ಮಾಜಿ ಕೇಂದ್ರ ಸಚಿವೆ ಬಿಜೊಯ್ ಚಕ್ರವರ್ತಿ ಅವರಿಗೂ ಪದ್ಮಶ್ರೀ ದೊರೆತಿದೆ.

error: Content is protected !!