ಕೊಂಡಜ್ಜಿಯಲ್ಲಿ ಇಂದು ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮಾವೇಶ

ದುರ್ಬಳಕೆ ಅಗತ್ಯ ನಮಗಿಲ್ಲ

ದುರ್ಬಳಕೆ ಪದದ ಅರ್ಥ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೆ ಗೊತ್ತಿಲ್ಲ. ದುರ್ಬಳಕೆ ಅಗತ್ಯವೂ ನಮಗಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕಾರ್ಯಾಧ್ಯಕ್ಷ ಎನ್.ಇ. ನಟರಾಜ್ ಹೇಳಿದ್ದಾರೆ.

ಇತ್ತೀಚೆಗೆ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು ತಮ್ಮ ಹೆಸರು ದುರ್ಬಳಕೆ ಮಾಡಿಕೊಂಡಿರುವುದಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ದೂರವಾಣಿ ಮೂಲಕ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಿದ್ದಾಗ ಒಪ್ಪಿಕೊಂಡಿದ್ದರು. ಆದರೆ ಏಕಾಏಕಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.

ದಾವಣಗೆರೆ, ಜ. 22- ಅಖಿಲ ಕರ್ನಾ ಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯ ಮಟ್ಟದ ಸಮಾವೇಶ  ನಾಳೆ ದಿನಾಂಕ 23  ಹಾಗೂ 24 ರಂದು ಹರಿಹರ ತಾಲ್ಲೂಕು ಕೊಂಡಜ್ಜಿ  ಬಸಪ್ಪ ಸ್ಕೌಟ್ ಅಂಡ್ ಗೈಡ್ಸ್ ನಿಸರ್ಗಧಾಮದಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ರಾಜ್ಯಾಧ್ಯಕ್ಷ ಮಹದೇ ವಯ್ಯ ಮಠಪತಿ, ಮಧ್ಯಾಹ್ನ 1.30ಕ್ಕೆ  ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ಸಮಾವೇಶ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ. ಸುರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಡಾ. ಕಿರಣ್ ಎಂ. ಗಾಜನೂರು ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೌಕರ ವರ್ಗದ ಪಾತ್ರ, ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಉಪನ್ಯಾಸ ನೀಡಲಿದ್ದಾರೆ. ಎರಡನೇ ದಿನದ ಕಾರ್ಯಕ್ರಮವು ನಾಡಿದ್ದು 24ರ ಭಾನುವಾರ ಬೆಳಿಗ್ಗೆ 9.30ಕ್ಕೆ ಆರಂಭವಾಗಲಿದೆ ಎಂದರು.

ಸರ್ಕಾರಿ ನೌಕರರ ಸಂಘವು ರಾಜ್ಯ ಸರ್ಕಾರ ಕೃಪಾ ಪೋಷಿತ ಮಂಡಳಿಯಾಗಿದೆ. ಒಕ್ಕೂಟ ಹೋರಾಟದ ಮೂಲಕ ನೌಕರರ ಬೇಡಿಕೆ ಈಡೇರಿಸಿಕೊಳ್ಳಲು ಯತ್ನಿಸಿದರೆ, ನೌಕರರ ಸಂಘವು ಸಂಧಾನದ ಮೂಲಕ ಪರಿಹಾರ ಕಲ್ಪಿಸುವುದಾಗಿ ಹೇಳುತ್ತದೆ. ನೌಕ ರರ ಸಂಘಗಳು ಇಸ್ಪೀಟ್ ಕ್ಲಬ್‌ಗಳಾಗಿವೆ. ನೌಕರರು ಎಚ್ಚೆತ್ತುಕೊಂಡು ಹಕ್ಕುಗಳ ಹೋ ರಾಟಕ್ಕೆ ನೈಜ ಸಂಘಟನೆ ಗುರುತಿಸಿ, ಬೆಂಬಲಿ ಸಬೇಕು ಎಂದು ಮಠಪತಿ ಹೇಳಿದರು.

ದೇಶದಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಅತಿ ಕಡಿಮೆ ವೇತನ ಪಡೆ ಯುತ್ತಿದ್ದಾರೆ. ಆದರೆ, ಉತ್ತಮ ಆಡಳಿತದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ. ಸರ್ಕಾರ ಎಲ್ಲಾ ಇಲಾಖೆಗಳಲ್ಲೂ ಹೊರ ಗುತ್ತಿಗೆ ನೌಕರರನ್ನು ನೇಮಿಸುವ ಮೂಲಕ ಸರ್ಕಾರಿ ನೌಕರರನ್ನು ಶೋಷಣೆಗೆ ಒಳಪಡಿಸುತ್ತಿದೆ ಎಂದರು. ಏಜೆಂಟರು ಹಾಗೂ ಉನ್ನತ ಅಧಿಕಾರಿಗಳು ಈ ಕಾರ್ಯದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಎನ್.ಇ. ನಟರಾಜ್, 30 ವರ್ಷ ಸೇವೆ ಪೂರೈಸಿರುವ ಅಥವಾ 50 ಮತ್ತು 55 ವರ್ಷ ವಯೋಮಾನದ ನೌಕರರ ದಕ್ಷತೆ ಮತ್ತು ವಿಶ್ವಾಸಾರ್ಹತೆ ಆಧಾರದ ಮೇಲೆ ನೌಕರರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವ ಅಧಿಸೂಚನೆ ಹೊರಡಿಸಿರುವುದು ಖೇದಕರ ಎಂದರು.

ಕಳೆದ 8 ವರ್ಷಗಳಿಂದಲೂ ಸರ್ಕಾರ ನೌಕರರ ಮೇಲೆ ಗಧಾಪ್ರಹಾರ ಮಾಡುತ್ತಿದೆ. ಹಿಂಬಾಗಿಲ ಮೂಲಕ ನೌಕರರ ಆತ್ಮಸ್ಥೈರ್ಯ ಕುಂದಿಸುವ ಯತ್ನ ನಡೆಸುತ್ತಿದೆ. ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಅದಕ್ಕೆ ಬದಲಾಗಿ ಕಡಿಮೆ ವೇತನಕ್ಕೆ  ಹೊರ ಗುತ್ತಿಗೆ ನೌಕರರನ್ನು ನೇಮಿಸುವುದು ಸೂಕ್ತವಲ್ಲ ಎಂದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ಆರ್. ಮಲ್ಲಿಕಾರ್ಜುನ ಸ್ವಾಮಿ, ರಮೇಶ್, ಕೆ.ರೇವಣಸಿದ್ದಪ್ಪ, ಕೆ.ಎನ್. ರಂಗೇಶ್, ಗೋವಿಂದರಾಜ್ ಹಾಗು ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

error: Content is protected !!