ಪಾದಯಾತ್ರೆಯು ಬೆಂಗಳೂರಿಗೆ ತಲುಪುವ ಮಾರ್ಗದಲ್ಲಿ ಸರ್ಕಾರದಿಂದ 2ಎ ಮೀಸಲಾತಿ ಘೋಷಣೆಯಾಗುವ ಭರವಸೆ ಇದೆ.
– ನಂದಿಹಳ್ಳಿ ಹಾಲಪ್ಪ, ಮಾಜಿ ಶಾಸಕರು, ಹಡಗಲಿ
ಹರಪನಹಳ್ಳಿ, ಜ.22- ಲಿಂಗಾಯತ ಪಂಚಮಸಾಲಿ ಮಕ್ಕಳ ಶಿಕ್ಷಣ, ಉದ್ಯೋಗಕ್ಕಾಗಿ 2ಎ ಮೀಸಲಾತಿಗಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಹಾಗೂ ಓಬಿಸಿ ಮೀಸ ಲಾತಿಗೆ ಸೇರ್ಪಡೆಗೊಳಿ ಸುವಂತೆ ಕೇಂದ್ರಕ್ಕೆ ಹಕ್ಕೊತ್ತಾಯಿಸಿ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲ ಸಂಗಮದ ಲಿಂಗಾಯಿತ ಧಾರ್ಮಿಕ ಪೀಠದಿಂದ ಬೆಂಗ ಳೂರಿನ ವಿಧಾನಸೌಧದವರೆಗೂ ಹಮ್ಮಿಕೊಂ ಡಿರುವ ಪಂಚಲಕ್ಷ ಹೆಜ್ಜೆಗಳ ಬೃಹತ್ ಐತಿಹಾಸಿಕ ಪಾದಯಾತ್ರೆ ಹರಪನಹಳ್ಳಿಗೆ ಆಗಮಿಸುತ್ತಿದ್ದು, ತಾಲ್ಲೂಕಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು 2 ಎ ಮೀಸಲಾತಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಪೂಜಾರ ತಿಳಿಸಿದರು.
ಸಮಾಜದ ಹಿರಿಯ ಮುಖಂಡ ಕುಂಚೂರು ವೀರಣ್ಣನವರ ನಿವಾಸದಲ್ಲಿ ಇಂದು ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇದೇ ದಿನಾಂಕ 25 ರಂದು ತಾಲ್ಲೂಕಿನ ನಂದಿಬೇವೂರು ಗ್ರಾಮಕ್ಕೆ ಪಾದಯಾತ್ರೆ ಆಗಮಿಸಲಿದ್ದು, ಸಮಾಜದ ಮಹಿಳೆಯರು ಕಳಸ ಹೊತ್ತು, ಹಾಗೂ ಸಕಲ ವಾದ್ಯಗ ಳೊಂದಿಗೆ ಮೆರವಣಿಗೆಯಲ್ಲಿ ಸಾಗಲಿದ್ದು, ಹಿರಿಯರು, ಮುಖಂಡರು ಪಾಲ್ಗೊಂಡು ಸ್ವಾಗತ ಕೋರಲಾಗುವುದು ಎಂದರು.
ಪಾದಯಾತ್ರೆಯು ನಂದಿಬೇವೂರು ಮೂಲಕ ಕಣಿವಿಹಳ್ಳಿ ಗ್ರಾಮಕ್ಕೆ ಆಗಮಿ ಸಲಿದೆ. ಮಧ್ಯಾಹ್ನದ ಪ್ರಸಾದ ವ್ಯವಸ್ಥೆಯನ್ನು ಅಲ್ಲಿಯೇ ಕಲ್ಪಿಸಲಾಗಿದೆ. ಕೋಡಿಹಳ್ಳಿ, ಬಾಗಳಿ, ಶೃಂಗಾರತೋಟ ಗ್ರಾಮಗಳ ಮಾರ್ಗದ ಮೂಲಕ ಹರಪನಹಳ್ಳಿಗೆ ಪಾದಯಾತ್ರೆ ಸಂಜೆ ಆಗಮಿಸಲಿದ್ದು, ಹೊಸಪೇಟೆ ರಸ್ತೆಯಲ್ಲಿರುವ ತರಳಬಾಳು ಕಲ್ಯಾಣ ಮಂಟ ಪದಲ್ಲಿ ಜನ ಜಾಗೃತಿ ಸಮಾವೇಶ ನಡೆಯಲಿದೆ. ನಂತರ ಶ್ರೀಗಳು ವಾಸ್ತವ್ಯ ಹೂಡಲಿದ್ದಾರೆ ಎಂದು ತಿಳಿಸಿದರು.
ಇದೇ ದಿನಾಂಕ 26ರಂದು ಮಧ್ಯಾಹ್ನ ಬಸ್ನಿಲ್ದಾಣದ ಇಜಾರಿ ಶಿರಸಪ್ಪ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ. ಇದಾದ ಬಳಿಕ ಪಾದಯಾತ್ರೆ ನೀಲಗುಂದಕ್ಕೆ ತೆರಳಿ ವಾಸ್ತವ್ಯ ಹಾಗೂ ಜನಜಾಗೃತಿ ಸಭೆ ನಡೆಸಲಿದೆ. ಇದೇ ದಿನಾಂಕ 27ರಂದು ಚಿರಸ್ತಹಳ್ಳಿ ಮಾರ್ಗದ ಮೂಲಕ ತೆಲಿಗಿಯಲ್ಲಿ ಜನಜಾಗೃತಿ ಸಮಾವೇಶ ನಡೆಸಿ ರಾತ್ರಿ ವಾಸ್ತವ್ಯ ಇದ್ದು, ಇದೇ ದಿನಾಂಕ 28 ರಂದು ದುಗ್ಗಾವತಿ ಮೂಲಕ ಹರಿಹರಕ್ಕೆ ಪಾದಯಾತ್ರೆ ತಲುಪಲಿದೆ ಎಂದರು.
ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತ ನಾಡಿ, ಪಾದಯಾತ್ರೆಯು ಬೆಂಗಳೂರಿಗೆ ತಲುಪುವ ಮಾರ್ಗದಲ್ಲಿ ಸರ್ಕಾರದಿಂದ 2ಎ ಮೀಸಲಾತಿ ಘೋಷಣೆ ಯಾಗುವ ಭರವಸೆ ಇದೆ. ಹರಪನಹಳ್ಳಿ ಜನಜಾಗೃತಿ ಸಮಾವೇಶದಲ್ಲಿ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಅಧ್ಯಕ್ಷ ಡಾ.ವಿಜಯಾನಂದ ಕಾಶಪ್ಪನವರು ಸೇರಿದಂತೆ, ವಿವಿಧ ಮುಖಂ ಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಹರಿಹರ ಪೀಠಗಳ ಶ್ರೀಗಳೂ ಕೂಡ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಹೋರಾಟ ಸಮಿತಿ ಗೌರವಾಧ್ಯಕ್ಷ ಎಂ. ಪರಮೇಶ್ವ ರಪ್ಪ, ಸಾರಿಗೆ ನಿಗಮದ ನಿರ್ದೇಶಕ ಆರುಂಡಿ ನಾಗರಾಜ, ಪ್ರಚಾರ ಸಮಿತಿ ಅಧ್ಯಕ್ಷ ಪಿ. ಕರಿಬಸಪ್ಪ, ಕಾರ್ಯದರ್ಶಿ ಬಸವರಾಜ ಅಡವಿಹಳ್ಳಿ, ತಿಮ್ಲಾಪುರ ನಾಗರಾಜ, ಮುಖಂ ಡರುಗಳಾದ ಕುಂಚೂರು ವೀರಣ್ಣ, ಶಶಿಧರ ಪೂಜಾರ, ಮತ್ತಿಹಳ್ಳಿ ಅಜ್ಜಣ್ಣ, ಎಂ.ಟಿ. ಬಸವನಗೌಡ, ಮಂಜುನಾಥ ಪೂಜಾರ, ಬಿ.ಎಸ್.ಲಿಂಗರಾಜ, ಹಾರಕನಾಳು ಪ್ರಕಾಶಗೌಡ, ವೀರೇಶ್, ನೀಲಗುಂದ ಸಿದ್ದೇಶ್, ಆರ್. ರೇವಣ್ಣ, ಬಸವರಾಜ, ಕೆಇಬಿ ಕರಿಬಸಪ್ಪ, ಪರಮೇಶ್, ಎ.ಜಿ. ಕೊಟ್ರಗೌಡ, ಕೊಟ್ರೇಶ್ ಇನ್ನಿತರರಿದ್ದರು.