ಪಾದಯಾತ್ರೆ ಮೂಲಕ ಒತ್ತಡ ಸರಿಯಲ್ಲ : ಮುರುಗೇಶ್ ನಿರಾಣಿ

ಬೆಂಗಳೂರು, ಜ.15 – ಏಕಾಏಕಿ ಪಾದಯಾತ್ರೆ ಮಾಡಿ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವಂತೆ ಒತ್ತಡ ಹಾಕುವುದು ಸರಿಯಲ್ಲ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪನವರು ನಮ್ಮ ಸಮುದಾಯವನ್ನು 2ಎಗೆ ಸೇರಿಸಲು ಒಪ್ಪಿಗೆ ನೀಡುವ ಭರವಸೆಯನ್ನು ಕೊಟ್ಟಿದ್ದಾರೆ. ಅವರ ಮಾತಿನಲ್ಲಿ ಎಲ್ಲರೂ ನಂಬಿಕೆ ಇಡಬೇಕು ಎಂದು ನೂತನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಪಕ್ಷದ ಕಚೇರಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಲು ನಡೆಸುತ್ತಿರುವ ಪಾದಯಾತ್ರೆಯ ಹಿಂದೆ ಯಾರಿದ್ದಾರೆಂದು ನಾನು ಹೇಳಬೇಕಾದ ಅಗತ್ಯವಿಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಷಯ ಎಂದಿದ್ದಾರೆ.

ನಾನು ಈ ಹಿಂದೆ ಪಾದಯಾತ್ರೆ ಕೈಗೊಳ್ಳಬೇಡಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಗೆ ಮನವಿ ಮಾಡಿದ್ದೆ. ಬಳಿಕ ಸಿ.ಸಿ.ಪಾಟೀಲ್ ಕೂಡ ಶ್ರೀಗಳಿಗೆ ಪಾದಯಾತ್ರೆ ನಡೆಸದಂತೆ ಮನವಿ ಮಾಡಿದ್ದರು. ನಾವು ಶ್ರೀಗಳಿಗೆ ಹೇಳುವಷ್ಟು ದೊಡ್ಡವರಲ್ಲ ಎಂದು ತಿಳಿಸಿದರು ಎಂದವರು ಹೇಳಿದ್ದಾರೆ.

ಶ್ರೀಗಳು ತಕ್ಷಣವೇ ಪಾದಯಾತ್ರೆ ರದ್ದು ಮಾಡಬೇಕೆಂದು ಅನೇಕ ಮುಖಂಡರು ಮನವಿ ಮಾಡಿದ್ದೇವೆ. ಯಾರೋ ಅವಕಾಶ ಸಿಗದವರು ಅವರಿಗೆ ಬೆಂಬಲ ಕೊಡುತ್ತಿದ್ದಾರೆ. ಇದರ ಹಿಂದೆ ಯಾರಿದ್ದಾರೆಂದು ನಾನು ಹೇಳುವುದಿಲ್ಲ ಎಂದರು.

error: Content is protected !!