ರಾಣೇಬೆನ್ನೂರು ತಾಲ್ಲೂಕು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ

ರಾಣೇಬೆನ್ನೂರು ತಾಲ್ಲೂಕು ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ - Janathavaniಕಾಂಗ್ರೆಸ್‌ಗೆ ಒಲಿದ ಅದೃಷ್ಟ…

ಮೆಡ್ಲೇರಿ ಗ್ರಾ.ಪಂ. ನಲ್ಲಿನ ಒಟ್ಟು 22 ಸದಸ್ಯರಲ್ಲಿ 19 ಸದಸ್ಯರು ಬಿಜೆಪಿ ಬೆಂಬಲಿತರಿದ್ದು, ಕಾಂಗ್ರೆಸ್ ಬೆಂಬಲಿತರು  3 ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಎಸ್.ಟಿ. ಮಹಿಳೆಗೆ ಮೀಸಲಾಗಿದೆ. ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿರುವ  ಶಾಂತಮ್ಮ ತಳವಾರ ಅವರಿಗೆ ಅಧ್ಯಕ್ಷಗಿರಿ ಒಲಿಯಲಿದೆ. ಅದರಂತೆ ಕರೂರ ಗ್ರಾ.ಪಂ.ನ ಒಟ್ಟು 15 ರಲ್ಲಿ 9 ಬಿಜೆಪಿ ಬೆಂಬಲಿತರು, 6 ಕಾಂಗ್ರೆಸ್ ಬೆಂಬಲಿತರಿದ್ದಾರೆ. ಅಧ್ಯಕ್ಷ ಸ್ಥಾನ ಎಸ್.ಸಿ. ಮಹಿಳೆಗೆ ಮೀಸಲಾಗಿದ್ದು, ಇಲ್ಲಿಯೂ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ನೀಲಮ್ಮ ಪೂಜಾರ ಅವರಿಗೆ ಅಧ್ಯಕ್ಷ ಹುದ್ದೆ ದಕ್ಕಲಿದೆ ಎನ್ನುತ್ತಿದ್ದಾರೆ.

ರಾಣೇಬೆನ್ನೂರು, ಜ.15- ಇಲ್ಲಿನ ಶ್ರೀ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ್, ತಹಶೀಲ್ದಾರ್ ಬಸನಗೌಡ ಕೋಟೂರ ಹಾಗೂ ಚುನಾವಣಾ ಆಯೋಗದ ಸಿಬ್ಬಂದಿ ವರ್ಗದವರ ಉಪಸ್ಥಿತಿಯಲ್ಲಿ ಅವಧಿ ಪೂರ್ಣಗೊಳ್ಳದ 7 ಪಂಚಾಯ್ತಿಗಳು  ಸೇರಿದಂತೆ ತಾಲ್ಲೂಕಿನ ಒಟ್ಟು 40 ಪಂಚಾಯ್ತಿಗಳ ಅಧ್ಯಕ್ಷ- ಉಪಾದ್ಯಕ್ಷರ ಆಯ್ಕೆಗೆ ಮೀಸಲಾತಿ ನಿಗದಿಗೊಳಿಸಲಾಯಿತು.

ಅರೇಮಲ್ಲಾಪುರ ಅಧ್ಯಕ್ಷ (ಹಿಂದುಳಿದ ಎ ವರ್ಗ), ಉಪಾಧ್ಯಕ್ಷ ( ಎಸ್.ಸಿ. ಮಹಿಳೆ), ಐರಣಿ ಅಧ್ಯಕ್ಷ ಸ್ಥಾನಕ್ಕೆ (ಹಿಂದುಳಿದ ಎ ವರ್ಗ), ಉಪಾಧ್ಯಕ್ಷ (ಸಾ. ಮಹಿಳೆ) ಮುದೇನೂರ ಅಧ್ಯಕ್ಷ ಸ್ಥಾನಕ್ಕೆ (ಹಿಂದುಳಿದ ಎ ವರ್ಗ), ಉಪಾಧ್ಯಕ್ಷ (ಸಾ. ಮಹಿಳೆ), ಚಳಗೇರಿ ಅಧ್ಯಕ್ಷ (ಹಿಂದುಳಿದ ಎ ವರ್ಗ), ಉಪಾಧ್ಯಕ್ಷ (ಸಾ. ಮಹಿಳೆ), ಬೆನಕನಕೊಂಡ ಅಧ್ಯಕ್ಷ ( ಹಿಂದುಳಿದ ಎ ವರ್ಗ ಮಹಿಳೆ), ಉಪಾಧ್ಯಕ್ಷ ( ಸಾ.), ಚಿಕ್ಕ ಕುರವತ್ತಿ ಅಧ್ಯಕ್ಷ ( ಹಿಂದುಳಿದ ಎ ವರ್ಗ ಮಹಿಳೆ), ಉಪಾಧ್ಯಕ್ಷ ( ಎಸ್.ಟಿ. ಮಹಿಳೆ), ಮಾಳನಾಯ್ಕನ ಹಳ್ಳಿ ಅಧ್ಯಕ್ಷ (ಹಿಂದುಳಿದ ಎ ವರ್ಗ ಮಹಿಳೆ), ಉಪಾಧ್ಯಕ್ಷ (ಸಾ) ಜೋಯಿಸರಹರಳಹಳ್ಳಿ ಅಧ್ಯಕ್ಷ ( ಹಿಂದುಳಿದ ಎ ವರ್ಗ ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ಬಿ ವರ್ಗ),ಕೋಡಿಯಾಲ ಅಧ್ಯಕ್ಷ (ಹಿಂದುಳಿದ ಬಿ ವರ್ಗ), ಉಪಾಧ್ಯಕ್ಷ (ಸಾ. ಮಹಿಳೆ), ತುಮ್ಮಿನಕಟ್ಟಿ ಅಧ್ಯಕ್ಷ ( ಹಿಂದುಳಿದ ಬಿ. ವರ್ಗ ಮಹಿಳೆ), ಗುಡಗೂರು ಅಧ್ಯಕ್ಷ ( ಸಾಮಾನ್ಯ), ಉಪಾಧ್ಯಕ್ಷ (ಎಸ್. ಸಿ.ಮಹಿಳೆ), ಬೇಲೂರು ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ಎ ವರ್ಗ ಮಹಿಳೆ), ಹರನಗಿರಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಲಿಂಗದಹಳ್ಳಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ಬಿ ಮಹಿಳೆ), ಕಮದೋಡ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾ. ಮಹಿಳೆ), ಕಾಕೋಳ ಅಧ್ಯಕ್ಷ ( ಸಾಮಾನ್ಯ), ಉಪಾಧ್ಯಕ್ಷ (ಎಸ್.ಸಿ‌ ಮಹಿಳೆ), ಕಜ್ಜರಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾಮನ್ಯ ಮಹಿಳೆ), ಗುಡ್ಡಗುಡ್ಡಾಪುರ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾ. ಮಹಿಳೆ), ಸುಣಕಲ್ಲಬಿದರಿ ಅಧ್ಯಕ್ಷ ( ಸಾಮಾನ್ಯ), ಉಪಾಧ್ಯಕ್ಷ (ಹಿಂದುಳಿದ ಎ ವರ್ಗ ಮಹಿಳೆ), ರಾಹುತನಕಟ್ಟಿ ಅಧ್ಯಕ್ಷ (ಸಾಮಾನ್ಯ), ಉಪಾಧ್ಯಕ್ಷ (ಸಾ.ಮಹಿಳೆ), ಹಿರೇಬಿ ದರಿ ಅಧ್ಯಕ್ಷ (ಸಾಮಾನ್ಯ ಮಹಿಳೆ), ಉಪಾಧ್ಯಕ್ಷ (ಎಸ್.ಟಿ.), ಮಾಕನೂರು ಅಧ್ಯಕ್ಷ (ಸಾ.ಮಹಿಳೆ), ಉಪಾಧ್ಯಕ್ಷ ( ಸಾಮಾನ್ಯ), ಇಟಗಿ ಅಧ್ಯಕ್ಷ (ಸಾ.ಮಹಿಳೆ), ಉಪಾಧ್ಯಕ್ಷ (ಎಸ್.ಟಿ. ಮಹಿಳೆ), ಅಸುಂಡಿ ಅಧ್ಯಕ್ಷ (ಸಾ.ಮಹಿಳೆ),ಉಪಾಧ್ಯಕ್ಷ (ಸಾಮಾನ್ಯ), ಹೊನ್ನತ್ತಿ ಅಧ್ಯಕ್ಷ (ಸಾ.ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ಎ ವರ್ಗ), ಕವಲೆತ್ತು ಅಧ್ಯಕ್ಷ (ಸಾ.ಮಹಿಳೆ), ಉಪಾಧ್ಯಕ್ಷ (ಎಸ್.ಸಿ.), ಉಕ್ಕುಂದ ಅಧ್ಯಕ್ಷ ( ಸಾ. ಮಹಿಳೆ), ಉಪಾಧ್ಯಕ್ಷ (ಎಸ್.ಸಿ.), ಅಂತರವಳ್ಳಿ ಅಧ್ಯಕ್ಷ (ಸಾ. ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಕುಪ್ಪೇಲೂರು ಅಧ್ಯಕ್ಷ (ಸಾ. ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಬಿಲ್ಲಹಳ್ಳಿ ಅಧ್ಯಕ್ಷ (ಸಾ.ಮಹಿಳೆ), ಉಪಾಧ್ಯಕ್ಷ (ಎಸ್.ಸಿ), ಗುಡ್ಡದ ಆನ್ವೇರಿ ಅಧ್ಯಕ್ಷ (ಎಸ್.ಸಿ.), ಉಪಾಧ್ಯಕ್ಷ (ಹಿಂದುಳಿದ ಎ ವರ್ಗ ಮಹಿಳೆ), ಹೆಡಿಯಾಲ ಅಧ್ಯಕ್ಷ (ಎಸ್.ಸಿ.), ಉಪಾಧ್ಯಕ್ಷ (ಅ ವರ್ಗ), ಸೋಮಲಾಪುರ ಅಧ್ಯಕ್ಷ  (ಎಸ್.ಸಿ.), ಉಪಾಧ್ಯಕ್ಷ (ಹಿಂದುಳಿದ ಎ ವರ್ಗ ಮಹಿಳೆ), ಕರೂರು ಅಧ್ಯಕ್ಷ (ಎಸ್.ಸಿ ಮಹಿಳೆ), ಉಪಾಧ್ಯಕ್ಷ (ಅ ವರ್ಗ), ನದಿಹರಳಹಳ್ಳಿ ಅಧ್ಯಕ್ಷ ( ಎಸ್.ಸಿ. ಮಹಿಳೆ), ಉಪಾಧ್ಯಕ್ಷ (ಹಿಂದುಳಿದ ಎ ವರ್ಗ), ವೈ.ಟಿ. ಹೊನ್ನತ್ತಿ ಅಧ್ಯಕ್ಷ (ಎಸ್.ಸಿ.ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ಮೆಡ್ಲೇರಿ ಅಧ್ಯಕ್ಷ (ಎಸ್.ಟಿ.), ಉಪಾಧ್ಯಕ್ಷ (ಸಾ. ಮಹಿಳೆ), ಹಲಗೇರಿ ಅಧ್ಯಕ್ಷ (ಎಸ್.ಟಿ.), ಉಪಾಧ್ಯಕ್ಷ (ಸಾಮಾನ್ಯ), ಹನುಮಾಪುರ ಅಧ್ಯಕ್ಷ (ಎಸ್.ಟಿ ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ), ನಿಟ್ಟೂರು ಅಧ್ಯಕ್ಷ (ಎಸ್.ಟಿ.ಮಹಿಳೆ), ಉಪಾಧ್ಯಕ್ಷ (ಸಾಮಾನ್ಯ).

ಒಟ್ಟು 20 ಸಾಮಾನ್ಯ, 4 ಎಸ್. ಟಿ, 8 ಹಿಂದುಳಿದ ಎ ವರ್ಗ, 6 ಎಸ್.ಸಿ, 2 ಹಿಂದುಳಿದ ಬಿ ವರ್ಗ. ಇವುಗಳಲ್ಲಿ ಶೇಕಡಾ 50 ಮಹಿಳೆಯರಿಗೆ ಮೀಸಲಾತಿ ಕಲ್ಪಿಸಲಾಗಿದ್ದು,  ಕೆಲವೆಡೆ ಕಂಡುಬಂದ ತಾಂತ್ರಿಕ ತೊಂದರೆಯನ್ನು ಚೀಟಿ ಎತ್ತುವುದರ ಮೂಲಕ ಸರಿಪಡಿಸಲಾಯಿತು.

error: Content is protected !!